ಬದನಾಳ್‍ಗೆ ರಾಹಲ್ ಭೇಟಿ: ಡಿ.ಕೆ.ಶಿವಕುಮಾರ್ ಪರಿಶೀಲನೆ

Spread the love

ಬದನಾಳ್‍ಗೆ ರಾಹಲ್ ಭೇಟಿ: ಡಿ.ಕೆ.ಶಿವಕುಮಾರ್ ಪರಿಶೀಲನೆ

ಮೈಸೂರು: ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರು ಗಾಂಧಿ ಜಯಂತಿಯಂದು ನಂಜನಗೂಡು ತಾಲೂಕು ಬದನವಾಳ್ ಗ್ರಾಮದ ಖಾದಿ ಮಂಡಳಿಗೆ ಭೇಟಿ ನೀಡಲಿರುವುದರಿಂದ ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಬದನಾಳ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್ ಶಿವಕುಮಾರ್ ನಮ್ಮ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಅಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧಿಯವರ ಅಧ್ಯಕ್ಷರಾಗಿ ವಹಿಸಿಕೊಂಡ ನಂತರ ರಾಷ್ಟ್ರ ವ್ಯಾಪಿ ಸ್ವಾತಂತ್ರ್ಯಕ್ಕೆ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟರು. ಗಾಂಧೀಜಿಯವರು ಈ ಗ್ರಾಮಕ್ಕೆ ಭೇಟಿ ನೀಡಿದ  ಈ ಪುಣ್ಯ ಭೂಮಿಗೆ ಗಾಂಧಿ ಕುಟುಂಬವು ಅಕ್ಟೋಬರ್ 2ರಂದು ಭೇಟಿ ನೀಡುತ್ತಿದೆ. ಅವರ ಜೊತೆಯಲ್ಲಿ ರಾಜ್ಯದ ನಾಯಕರು ಭಾಗವಹಿಸಲಿದ್ದಾರೆ.

ಭಾರತದ ಐಕ್ಯತಾ ಯಾತ್ರೆಯನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 3700 ಕಿಲೋ ಮೀಟರ್ ನಡಿಗೆ ಮುಖಾಂತರ  ಕರ್ನಾಟಕದಲ್ಲಿ 510 ಕಿ.ಮೀ ನಡಿಗೆ 22 ದಿನಗಳ ಕಾಲ ನಡೆಯಲಿದೆ ಅವರ ಜೊತೆಯಲ್ಲಿ ರಾಜ್ಯದ ನಾಯಕರು ಇರುತ್ತಾರೆ. ಇದು ಶಾಂತಿ ಸಭೆಯಾಗಿದ್ದು. ರಾಹುಲ್ ಗಾಂಧಿ ರವರು ಈ ಸ್ಥಳವನ್ನು ಆಯ್ಕೆ ಮಾಡಿಕೊಂಡು ಸಂತೋಷ ತಂದ ವಿಷಯವಾಗಿದೆ.  ಈ ಪುಣ್ಯಭೂಮಿಯಲ್ಲಿ ಶಾಂತಿ ಸಭೆ ಮಾಡಲು ನಿರ್ಧರಿಸಿದ ಕಾರಣ ನಾವು ಇಲ್ಲಿ ಪರಿಶೀಲನೆ ಮಾಡಲು ಬಂದಿರುವುದಾಗಿ ತಿಳಿಸಿದರು.

 ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ  ಧ್ರುವನಾರಾಯಣ್. ಮಾಜಿ ಶಾಸಕ ಕಳಲೆಕೇಶವಮೂರ್ತಿ, ಸಂಸದ ಡಿ.ಕೆ ಸುರೇಶ್, ಸೇರಿದಂತೆ ಹಲವರು ಇದ್ದರು.


Spread the love

Leave a Reply

Please enter your comment!
Please enter your name here