ಬನ್ನಂಜೆ ಶ್ರೀ ಗೋವಿಂದಾಚಾರ್ಯರ ನಿಧನಕ್ಕೆ ಮಂಗಳೂರು ಬಿಷಪ್ ಸಂತಾಪ

Spread the love

ಬನ್ನಂಜೆ ಶ್ರೀ ಗೋವಿಂದಾಚಾರ್ಯರ ನಿಧನಕ್ಕೆ ಮಂಗಳೂರು ಬಿಷಪ್ ಸಂತಾಪ

ಮಂಗಳೂರು: ಶ್ರೇಷ್ಠ ವಿದ್ವಾಂಸ, ಖ್ಯಾತ ಪ್ರವಚನಕಾರ, ಪದ್ಮಶ್ರೀ ಪುರಸ್ಕೃತ ಉಡುಪಿಯ ಬನ್ನಂಜೆ ಗೋವಿಂದಾಚಾರ್ಯರ ನಿಧನ ಸಮಾಜಕ್ಕೆ ದೊಡ್ಡ ನಷ್ಟ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಪೀಟರ್ ಪಾವ್ಲ್ ಸಲ್ಡಾನಾ ಸಂತಾಪ ಸೂಚಿಸಿದ್ದಾರೆ.

ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ನಾಡಿನ ಅಗ್ರಮಾನ್ಯ ಸಂಸ್ಕೃತ ವಿದ್ವಾಂಸರು. ಭಾರತೀಯ ತತ್ವಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿ ಸಮಕಾಲೀನ ಚಿಂತನೆಯೊಂದಿಗೆ ಜೋಡಿಸಿ ಸಮಾಜವನ್ನು ಜಾಗೃತಗೊಳಿಸಿ, ಮುಂದಿನ ಪೀಳಿಗೆಗಳಿಗೆ ಆಧ್ಯಾತ್ಮ ತತ್ವ ಧಾರೆಯನ್ನು ಎರೆದ ಲೇಖಕ, ವಾಗ್ಮಿ ಹಾಗೂ ತಮ್ಮ ಪ್ರವಚನಗಳಿಂದ ನಾಡಿನೆಲ್ಲೆಡೆ ಜ್ಞಾನವನ್ನು ಪಸರಿಸಿದ್ದಾರೆ. ಅವರ ಅಗಲುವಿಕೆಯಿಂದ ನಾಡಿನ ಸಾರಸ್ವತ ಕ್ಷೇತ್ರ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನಾ ಅವರು ಸಂತಾಪ ಸೂಚಿಸಿದ್ದಾರೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕ್ಯಾಸ್ಟೊಲಿನೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love