
ಬರ್ಕೆ ಪೊಲೀಸರಿಂದ ದ್ವಿಚಕ್ರ ವಾಹನ ಕಳ್ಳರ ಬಂಧನ
ಮಂಗಳೂರು: ದ್ವಿಚಕ್ರ ವಾಹನ ಕಳ್ಳತನದ ಆರೋಪದ ಮೇಲೆ ಬರ್ಕೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬೈಕಂಪಾಡಿ ನಿವಾಸಿ ಸುಮಂತ್ ಬರ್ಮನ್ (19) ಮತ್ತು ಪುತ್ತೂರು ನಿವಾಸಿ ತಾರಾನಾಥ ಸಾಲಿಯಾನ್ ಎಂದು ಗುರುತಿಸಲಾಗಿದೆ.
ಡಿಸೆಂಬರ್ 7 ರಂದು ಬಳ್ಳಾಲ್ ಬಾಗ್ ಬಳಿ ನಿಲ್ಲಿಸಿದ್ದ ವಾಹನ ಕಳವಾದ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದ್ದು ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಬಂದಿತರಿಂದ ಎರಡು ದ್ವಿಚಕ್ರ ವಾಹನ, ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ
ಬಂಧಿಸಿದ ಆರೋಪಿ ಸುಮಂತ್ ಬರ್ಮನ್ ವಿರುದ್ದ ಕಾವೂರು, ಪಣಂಬೂರು, ಮಮಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಹಾಗೂ ಆರೋಪಿ ತಾರಾನಾಥ ಸಾಲಿಯಾನ್ ಈತನ ಮೇಲೆ ಮಂಗಳೂರು ಉತ್ತರ , ಸುರತ್ಕಲ್, ಉಳ್ಳಾಲ, ಮಂ. ದಕ್ಷೀಣ, ಮಂ. ಪೂರ್ವ ಹಾಗೂ ಪುತ್ತೂರು ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳ್ಳತನ, ದರೋಡೆ, ಮಾದಕ ವಸ್ತು ಗಾಂಜಾ ಮಾರಾಟ ಮಾಡಿದ ಬಗ್ಗೆ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿರುತ್ತದೆ.