ಬರ್ಕೆ ಫ್ರೆಂಡ್ಸ್ ನಿಂದ ಪದ್ಮಶ್ರೀ ಪ್ರಶಸ್ತಿ ವಿಜೇತ ಅಮೈ ಮಹಾಲಿಂಗ ನಾಯ್ಕ್ ಸನ್ಮಾನ

Spread the love

ಬರ್ಕೆ ಫ್ರೆಂಡ್ಸ್ ನಿಂದ ಪದ್ಮಶ್ರೀ ಪ್ರಶಸ್ತಿ ವಿಜೇತ ಅಮೈ ಮಹಾಲಿಂಗ ನಾಯ್ಕ್ ಸನ್ಮಾನ

ಬರ್ಕೆ ಫ್ರೆಂಡ್ಸ್ ಇದರ 30ನೇ ವಾರ್ಷಿಕೋತ್ಸವ ಪ್ರಯುಕ್ತ ಇತ್ತೀಚಿಗೆ ಮಣ್ಣಗುಡ್ಡೆ ಸರಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ಅಮೈ ಮಹಾಲಿಂಗ ನಾಯ್ಕ್ ಅವರನ್ನು ನಮ್ಮ ಕುಡ್ಲ ಚಾನೆಲ್ ವ್ಯವಸ್ಥಾಪಕ ಲೀಲಾಕ್ಷ ಕರ್ಕೇರ ಸನ್ಮಾನಿಸಿ ಗೌರವಿಸಲಾಯಿತು.

ಇದೇ ವೇಳೆ ಮಣ್ಣಗುಡ್ಡೆ ಸರಕಾರಿ ಶಾಲೆಯ ಮಕ್ಕಳಿಗೆ ಸಂಘದ ವತಿಯಿಂದ ಸಮವಸ್ತ್ರವನ್ನು ಮುಖ್ಯೋಪಾಧ್ಯಾಯರಾದ ಗಣೇಶ್ ಇವರಿಗೆ ಹತ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಯಾ ಗ್ರೂಪ್ ನ ಮಾಲಕರಾದ ವಾಸುದೇವ ಕಾಮತ್, ಮಾಧವ ಕಾಮತ್, ಸರ್ವದ ಡಿಸ್ಲರಿಯ ಮಾಲಕರಾದ ಮನು ಕುಮಾರ್, ಉದ್ಯಮಿಗಳಾದ ಅಜಿತ್ ಮುಂಬೈ,ಸೈಕಲ್ ಶೋಪಿ ಯ ಮಾಲಕರಾದ ಪೂರ್ಣಚಂದ್ರ ಕುಲಾಲ್,ಹಾಗೂ ಸ್ಥಳೀಯ ಕಾರ್ಪೊರೇಟರ್ ಗಳಾದ ಸಂಧ್ಯಾ ಮೋಹನ್ ಆಚಾರ್, ಲೀಲಾವತಿ ಪ್ರಕಾಶ್ , ಸಂಘದ ಸ್ಥಾಪಕ ಅಧ್ಯಕ್ಷರಾದ ಯೇಜ್ಞೇಶ್ವರ ಬರ್ಕೆ, ಗೌರವಾಧ್ಯಕ್ಷರಾದ ಸುಚಿಂದ್ರ ವಿ ಅಮೀನ್ ಅಧ್ಯಕ್ಷರಾದ ಕಿಶನ್ ಕುಮಾರ್ ಉಪಸ್ಥಿತರಿದ್ದರು.

ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ದಯಾನಂದ್ ಕತ್ತಲ್ ಸಾರ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಕಾರ್ಯದರ್ಶಿಯಾದ ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು.


Spread the love