ಬಸ್ಸಿನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ ತೋರಿದ ವ್ಯಕ್ತಿಯ ಬಂಧನ

Spread the love

ಬಸ್ಸಿನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ ತೋರಿದ ವ್ಯಕ್ತಿಯ ಬಂಧನ

ಮಂಗಳೂರು: ಬಸ್ಸಿನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಕಂಕನಾಡಿ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಬಿಸಿರೋಡು ನಿವಾಸಿ ಮಹಮ್ಮದ್‌ ಮುಸ್ತಾಫ ಎಂದು ಗುರುತಿಸಲಾಗಿದೆ.

ಮಂಗಳೂರಿನ ಯುವತಿಯೋರ್ವರು ಬೆಂಗಳೂರುನಿಂದ ಇಂಟರ್ ವ್ಯೂ ಸಂಬಂಧ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಬರುತ್ತಿರುವ ಸಮಯ ದಿನಾಂಕ 07-06-2022 ರಂದು ಬೆಳಗಿನ ಜಾವ ಸುಮಾರು 05-00 ಗಂಟೆಗೆ ಆಕೆಯ ಬಲಭಾಗದಲ್ಲಿ ಚಾಲಕನ ಭಾಗದಲ್ಲಿ ಸ್ತ್ರೀಪರ್ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯು ಆಕೆಯ ಅನುಚಿತವಾಗಿ ವರ್ತಿಸಿದ ಬಗ್ಗೆ ಆಕೆಯು ಚಾಲಕ ಪ್ರಯಾಣಿಕರಿಗೆ ತಿಳಿಸಿದ್ದಾರೆ

ಆ ವ್ಯಕ್ತಿಯನ್ನು ಪ್ರಯಾಣಿಕರು ವಿಚಾರಿಸಲಾಗಿ ಆತನ ಹೆಸರು ಮಹಮ್ಮದ್ ಮುಸ್ತಾಫ ಬಿಸಿರೋಡ್ ನಿವಾಸಿ ಎಂದು ತಿಳಿಸಿದ್ದು ಏನು ಮಾಡುತ್ತೀರಿ ಎಂದು ಜೋರು ಧ್ವನಿಯಲ್ಲಿ ಒರಟಾಗಿ ವರ್ತಿಸಿದ್ದು ಬಸ್ಸಿನ ಸಿಬ್ಬಂದಿಯವರಿಗೆ ಹೇಳಬೇಕೆನ್ನುವ ಸಮಯ ಬಸ್ಸು ಪಂಪವೆಲ್ ಸ್ಟಾಪ್‌ನಲ್ಲಿ ನಿಂತಾಗ ಆತನು ಬಸ್ಸಿನಿಂದ ಇಳಿದು ತಪ್ಪಿಸಿಕೊಂಡು ಓಡಿ ಹೋಗಿದ್ದು ನಂತರ ಕಂಕನಾಡಿ ನಗರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ನಂತರ ಸಂತ್ರಸ್ಥೆ ಇಂಟರ್ ವ್ಯೂ ಮುಗಿಸಿಕೊಂಡು ದಿನಾಂಕ 07-06-2022 ರಂದು ರಾತ್ರಿ ಸಮಯ ಕಂಕನಾಡಿ ಠಾಣೆಗೆ ಬಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ


Spread the love