ಬಹುದಿನಗಳ ನಂತರ ಉಡುಪಿಯಲ್ಲಿ ರಂಗ ಚಟುವಟಿಕೆ

Spread the love

ಬಹುದಿನಗಳ ನಂತರ ಉಡುಪಿಯಲ್ಲಿ ರಂಗ ಚಟುವಟಿಕೆ

ಉಡುಪಿ: ಕೊರೋನ ದಲ್ಲಿ ಸ್ತಬ್ದವಾಗಿದ್ದ ರಂಗ ಚಟುವಟಿಕೆ ಉಡುಪಿಯಲ್ಲಿ ಮತ್ತೆ ಪ್ರಾರಂಭವಾಗಿದ್ದು, ಇತ್ತೀಚೆಗೆ ಮಣಿಪಾಲದ ನಿರ್ಮಿತಿ ಕೇಂದ್ರದ ಸುಂದರ ಪರಿಸರದಲ್ಲಿ ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ (ರಿ) ಪರ್ಕಳ , ನಿರ್ಮಿತಿ ಕೇಂದ್ರ , ಮಣಿಪಾಲ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರ ಸಹಕಾರ ದೊಂದಿಗೆ ಶ್ರೀಮತಿ ಶಿಲ್ಪಾ ಜೋಶಿಯವರ ಏಕವ್ಯಕ್ತಿ ರಂಗಪ್ರಯೋಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಭಾವಗೀತೆಗಳ ಭಾವಸಂಜೆಯಲ್ಲಿ ಉಡುಪಿಯ ಕಲಾವಿದರಾದ ರೇಖ ಸಾಮಗ, ಡಾ.ಪ್ರತಿಮ, ಡಾ.ಪ್ರಜ್ಞಾ ಮಾರ್ಪಳ್ಳಿ ಹಾಗೂ ರಂಜನಿಯವರು ಸುಂದರ ಭಾವಗೀತೆಗಳನ್ನು ಹಾಡಿ ಸಂಜೆಯ ಇಂಪನ್ನು ಹೆಚ್ಚಿಸಿದರು. ನಂತರ ನಡೆದ ಏಕವ್ಯಕ್ತಿ ಪ್ರದರ್ಶನ ನನ್ನೊಳಗಿನ ಅವಳು

ರಚನೆ ಹಾಗೂ ಅಭಿನಯ – ಶಿಲ್ಪಾ ಜೋಶಿ, ಗೀತಂ ಗಿರೀಶ್ ರವರ ಸಂಗೀತ , ಹಾಗೂ ರವಿರಾಜ್ ಹೆಚ್ ಪಿ ಯವರ ಪರಿಕಲ್ಪನೆ ಹಾಗೂ ನಿರ್ದೇಶನದ ರಂಗಪ್ರಯೋಗ ಜನಮನ್ನಣೆಗೆ ಪಾತ್ರವಾಯಿತು.

ಕಾರ್ಯ ಕ್ರಮದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಜೋಶಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಹರೀಶ್ ಜೋಶಿ . ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಪ್ರಭಾ ಶೆಣೈ ಮಾತನಾಡಿದರು. ಜೋಶಿ ಪ್ರತಿಷ್ಠಾನದ ಕಾರ್ಯದರ್ಶಿ ಶಿಲ್ಪಾಜೋಶಿಯವರು ಧನ್ಯವಾದ ಸಮರ್ಪಿಸಿದರು. ರಂಗನಟಿ ಪವಿತ್ರ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಶ್ರೀ ವಿಶ್ವನಾಥಶೆಣೈ, ಹಿರಿಯ ಮುಂಬೈ ಕನ್ನಡ ರಂಗಭೂಮಿಯ ಹೆಸರಾಂತ ನಟ ಮೋಹನ್ ಮಾರ್ನಾಡ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಉಪಾಧ್ಯಕ್ಷರಾದ ನಾಗರಾಜ್ ಹೆಬ್ಬಾರ್ ಸಂಧ್ಯಾ ಶೆಣೈ ಸುಗುಣ ಸುವರ್ಣ ಹಾಗೂ ಸಂಘಟಕ ಈಶ್ವರ ಶೆಟ್ಟಿ ಚಿಟ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.


Spread the love