
ಬಾಲಕಿಗೆ ಲೈಂಗಿಕ ದೌರ್ಜನ್ಯ: ಯುವಕನ ವಿರುದ್ಧ ಪ್ರಕರಣ ದಾಖಲು
ಸುಳ್ಯ: ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು ಬಳಿಕ ಗರ್ಭಧಾರಣೆಗೆ ಕಾರಣವಾದ ಆರೋಪದಲ್ಲಿ ಯುವಕನೋರ್ವನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.
ಸುಳ್ಯದ ಉಬರಡ್ಕ ಮಿತ್ತೂರಿನ ತೀರ್ಥಪ್ರಸಾದ್ (25) ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಈತ 4 ತಿಂಗಳ ಹಿಂದೆ ಪರಿಚಯವಾದ ಬಾಲಕಿಯನ್ನು ಜೂನ್ 30ರಂದು ಸುಳ್ಯಕ್ಕೆ ಬರಹೇಳಿ ತನ್ನ ಸ್ನೇಹಿತನ ರೂಮ್‍ಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡಿದ್ದ ಅಲ್ಲದೇ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬಾಲಕಿಗೆ ಬೆದರಿದ್ದ ಎಂದು ದೂರಲಾಗಿದೆ.
ಹೊಟ್ಟೆನೋವು ಆಗುತ್ತಿದೆ ಎಂದು ಮನೆಯಲ್ಲಿ ತಿಳಿಸಿದರಿಂದ ಸೋಮವಾರ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಸ್ಕ್ಯಾನಿಂಗ್‍ಗೆ ಸೂಚಿಸಿದ ನಂತರ ಬಾಲಕಿ ಗರ್ಭಾವತಿಯಾಗಿರುವ ವಿಷಯ ಬೆಳಕಿಗೆ ಬಂದಿದೆ. ತನ್ನ ಮಗಳನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡಿರುವ ತೀರ್ಥಪ್ರಸಾದ ವಿರುದ್ದ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಬಾಲಕಿಯ ತಾಯಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.