ಬಾಲಕಿಯನ್ನು ಪೀಡಿಸಿದ ಆಟೋ ಡ್ರೈವರ್ ನ ಬಂಧನ

Spread the love

ಬಾಲಕಿಯನ್ನು ಪೀಡಿಸಿದ ಆಟೋ ಡ್ರೈವರ್ ನ ಬಂಧನ

ಮಡಿಕೇರಿ: ಶಾಲೆಯಿಂದ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ನಿತ್ಯ ಕಾಡುತ್ತಿದ್ದ ಆಟೋ ಡ್ರೈವರ್ ನ್ನು ಕುಶಾಲನಗರ ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.

ಕುಶಾಲನಗರ ಮುಳ್ಳುಸೋಗೆಯ ಜನತಾ ಕಾಲೋನಿ ನಿವಾಸಿ ಮಂಜುನಾಥ್ ಹಾಗೂ ರೇಖಾ ದಂಪತಿ ಪುತ್ರ ಹೇಮಂತ್ ಕುಮಾರ್ ಬಂಧಿತ ಆರೋಪಿ. ಈತ ಕುಶಾಲನಗರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಸಂಜೆ ಹೊತ್ತು ಶಾಲೆ ಬಿಟ್ಡು ಮನೆಗೆ ತೆರಳುವ ಹೆಣ್ಣು ಮಕ್ಕಳನ್ನು ಚುಡಾಯಿಸೋದು, ಹಿಂಸೆ ನೀಡುವುದು ಹೀಗೆ ಮಾಡುತ್ತಿದ್ದನು.

ಈ ನಡುವೆ ಬುಧವಾರ ಬಾಲಕಿ ಶಾಲೆಬಿಟ್ಟು ತೆರಳುವ ಸಂದರ್ಭ ಆರೋಪಿ ಹೇಮಂತ್ ಕುಮಾರ್ ಬಾಲಕಿಯನ್ನು ಪೀಡಿಸಿದ್ದನು. ಈ ಬಗ್ಗೆ ಬಾಲಕಿ ಪೋಷಕರಿಗೆ ತಿಳಿಸಿದ್ದು, ಬಾಲಕಿಯ ತಂದೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. 2012 ರ ಪೋಕ್ಸೋ ಕಾಯ್ದೆಯಡಿ ಯುವಕನ ಮೇಲೆ ಪ್ರಕರಣ ದಾಖಲಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿದಾಗ ನ್ಯಾಯಾಲಯ ಆರೋಪಿ ಹೇಮಂತ್ ಕುಮಾರ್ ನನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ

ಇಂತಹವರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯದ ವಾತಾವರಣ ಸೃಷ್ಟಿಯಾಗುತ್ತಿದೆ. ಸ್ಥಳೀಯ ಹೆಚ್ ಆರ್ ಪಿ ಕಾಲೋನಿಗೆ ತೆರಳುವ ರಸ್ತೆ, ದಂಡಿನ ಪೇಟೆ.ಕೋಣಮಾರಮ್ಮ ದೇವಸ್ಥಾನ ರಸ್ತೆಯಲ್ಲಿರುವ ಕ್ಯಾಂಟೀನ್, ಐಬಿ ಜಂಕ್ಷನ್, ಗುಂಡುರಾವ್ ಬಡಾವಣೆ ರಸ್ತೆ, ಬೈಚನಹಳ್ಳಿ. ಖಾಸಗಿ ಬಸ್ಸು ನಿಲ್ದಾಣ ಹಿಂಭಾಗ ರಸ್ತೆ ಸೇರಿದಂತೆ ಕೆಲವು ಸ್ಥಳಗಳಲ್ಲಿ ಹೆಣ್ಣು ಮಕ್ಕಳನ್ನು ಪೀಡಿಸುವ ಮತ್ತು ಚುಡಾಯಿಸುವ ಪಡ್ಡೆ ಹುಡುಗರ ಹಾವಳಿ ಹೆಚ್ಚಾಗಿದ್ದು, ಹೆಣ್ಣು ಮಕ್ಕಳು ಪ್ರತಿನಿತ್ಯ ಪೋಲಿ ಹುಡುಗರ ಹಾವಳಿಯಿಂದ ತತ್ತರಿಸಿದ್ದು, ಪೊಲೀಸರು ಶಾಲಾ ಕಾಲೇಜು ತೆರಳುವ ಮತ್ತು ಬಿಡುವ ಸಮಯದಲ್ಲಿ ಎಚ್ಚರ ವಹಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Spread the love

Leave a Reply

Please enter your comment!
Please enter your name here