ಬಾಲಕಿಯ ಅತ್ಯಾಚಾರ ಆರೋಪ; ಯುವಕರಿಬ್ಬರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

Spread the love

ಬಾಲಕಿಯ ಅತ್ಯಾಚಾರ ಆರೋಪ; ಯುವಕರಿಬ್ಬರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಬಂಟ್ವಾಳ: ಬಾಲಕಿಯೊಬ್ಬಳನ್ನು ಅತ್ಯಾಚಾರಗೈದು ಬಳಿಕ ಮೊಬೈಲ್ ನಲ್ಲಿ ಆಕೆಯ ನಗ್ನ ಫೋಟೋಗಳನ್ನು ತೆಗೆದು ಬೆದರಿಕೆ ಹಾಕಿರುವ ಆರೋಪದಲ್ಲಿ ಇಬ್ಬರು ಯುವಕರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆರೋಪಿಗಳಾದ ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಅಬೂಬಕರ್‌ ಸಿದ್ದೀಕ್‌ ಮತ್ತು ಚಪ್ಪಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ‌

ಬೋಳಂತೂರು ಗ್ರಾಮದ ಮಹಿಳೆಯೊಬ್ಬರ ನಾದಿನಿಯಾದ ಸಂತ್ರಸ್ತ ಬಾಲಕಿಯನ್ನು ಆಕೆಯ ನೆರೆಮನೆಯವನಾದ ಆರೋಪಿ ಅಬೂಬಕರ್‌ ಸಿದ್ದೀಕ್ ಮತ್ತು ಆತನ ಸ್ನೇಹಿತ ಚಪ್ಪಿ ಪುಸಲಾಯಿಸಿ ಜ.25ರಂದು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿ‌ನಲ್ಲಿ ಆರೋಪಿಸಲಾಗಿದೆ.

ಜ.25ರಂದು ರಾತ್ರಿ ಬಾಲಕಿಗೆ ಫೋನ್ ಕರೆ ಮಾಡಿರುವ ಸಿದ್ದೀಕ್ ನಿನ್ನೊಂದಿಗೆ ಮಾತಾಡಲು ಇದೆ. ಮನೆಯ ಹೊರಗೆ ಬಾ ಎಂದು ಕರೆದಿದ್ದು, ಬಳಿಕ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಬಾಲಕಿಯ ನಗ್ನ ಪೋಟೋಗಳನ್ನು ತೆಗೆದಿದ್ದು, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಪೋಟೋಗಳನ್ನು ಬಹಿರಂಗಪಡಿಸುವುದಾಗಿ ಹೆದರಿಸಿದ್ದಾರೆ. ಅಲ್ಲದೆ ಇದೇ ವಿಚಾರ ಮುಂದಿಟ್ಟು ಮತ್ತೆ ಬಾಲಕಿಯನ್ನು ಕರೆಯುತ್ತಿದ್ದಾರೆ ಎಂದು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


Spread the love