ಬಾಲವನದ ಜಾದೂಗಾರ ನಿರ್ಮಾಪಕರಿಗೆ ಪ್ರಶಸ್ತಿ

Spread the love

ಬಾಲವನದ ಜಾದೂಗಾರ ನಿರ್ಮಾಪಕರಿಗೆ ಪ್ರಶಸ್ತಿ

ಕುಂದಾಪುರ: ಕೇರಳದ ಕಣ್ಣೂರಿನ ಯುನಿಕ್ ಫಿಲ್ಮ್ ಪ್ರೊಡಕ್ಷನ್ ಕಂಪೆನಿ ಏರ್ಪಡಿಸಿದ ಅಂತರಾಷ್ಟ್ರೀಯ ಕಿರು ಚಲನಚಿತ್ರೋತ್ಸವ 2022ರಲ್ಲಿ ಕುಂದಾಪುರ ವಸಂತ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಿದ “ಬಾಲವನದ ಜಾದೂಗಾರ” ಶ್ರೇಷ್ಠ ಕಿರು ಚಿತ್ರ ಪ್ರಶಸ್ತಿ ಪಡೆಯಿತು.

ಚಿತ್ರದ ನಿರ್ದೇಶಕ ಇ. ಎಂ. ಅಶ್ರಫ್ ಅವರು ಕುಂದಾಪುರಕ್ಕೆ ತಂದ ಈ ಪ್ರಶಸ್ತಿಯನ್ನು ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಕೆರಾಡಿ ಅವರು ನಿರ್ಮಾಪಕ ಕೆ. ಪಿ. ಶ್ರೀಶನ್ ಅವರಿಗೆ ಕಂಭಾಸಿ ಆನೆಗುಡ್ಡೆ ದೇವಸ್ಥಾನದ ವಠಾರದಲ್ಲಿ ಹಸ್ತಾಂತರಿಸಿದರು.

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಶುಭ ಹಾರೈಸಿದರು.

ಕಸಾಪ ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ತಾಲೂಕು ಕಸಾಪ ಕಾರ್ಯದರ್ಶಿ ದಿನಕರ ಆರ್. ಶೆಟ್ಟಿ ಹಾಗೂ ಕೆ. ಪಿ. ಶ್ರೀಶನ್ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಯು. ಎಸ್. ಶೆಣೈ ನಿರೂಪಿಸಿದರು.


Spread the love