ಬಾಹ್ಯಾಕಾಶದಲ್ಲಿ ಸೂಕ್ಷ್ಮಜೀವಿಗಳು: ಸವಾಲುಗಳು ಮತ್ತು ಪರಿಹಾರಗಳು ಉಪನ್ಯಾಸ

Spread the love

ಬಾಹ್ಯಾಕಾಶದಲ್ಲಿ ಸೂಕ್ಷ್ಮಜೀವಿಗಳು: ಸವಾಲುಗಳು ಮತ್ತು ಪರಿಹಾರಗಳು ಉಪನ್ಯಾಸ

ನಾಸಾ (NASA) ಜೆಟ್ ಪ್ರೊಪಲ್ಶನ್ ಪ್ರಯೋಗಾಲಯದ ಖ್ಯಾತ ವಿಜ್ಞಾನಿ ಡಾ. ಕಸ್ತೂರಿ ವೆಂಕಟೇಶ್ವರನ್ ಯೆನೆಪೋಯ ರಿಸರ್ಚ್ ಸೆಂಟರ್, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ)ಕ್ಕೆ 6ನೇ ಅಕ್ಟೋಬರ್ 2022ರಂದು ಭೇಟಿ ನೀಡಿ ಬಾಹ್ಯಾಕಾಶದಲ್ಲಿ ಸೂಕ್ಷ್ಮಜೀವಿಗಳು: ಸವಾಲುಗಳು ಮತ್ತು ಪರಿಹಾರಗಳು ಎನ್ನುವ ವಿಷಯದ ಬಗ್ಗೆ ಆಹ್ವಾನಿತ ಉಪನ್ಯಾಸ ನೀಡಿದರು.

ಈ ಉಪನ್ಯಾಸದಲ್ಲಿ ಅವರು ಆಂಟಿ ಬಯೋಫಿಲಮ್ ನಾನೋಮೆಟೀರಿಯಲ್ ಅಭಿವ್ರದ್ಧಿ ಪಡಿಸುವಿಕೆಯಲ್ಲಿ ತಂತ್ರಜ್ಞಾನದ ಪಾತ್ರ, ಆಂಟಿ-ಮೈಕ್ರೋಬಿಯಲ್ ಪ್ರತಿರೋಧ ವಂಶವಾಹಿಗಳು, ಅಂತರಾಷ್ಟೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸೂಕ್ಷ್ಮಜೀವಿಗಳ ವಿಶ್ಲೇಷಣೆ, ವಿಕಿರಣ ಸಹಿಷ್ಣು ಶಿಲೀಂದ್ರಗಳು ಹಾಗು ಇನ್ನಿತರ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಹೇಳಿದರು. ಕಲಾಮಿಯಲ್ಲಾ ಎಂಬ ಬಾಕ್ಟೀರಿಯಾದ ISS ಹಾಗೂ ವೈದ್ಯಕೀಯ ಮೂಲದ ಬಗ್ಗೆ ವೈಜ್ಞಾನಿಕ ಪ್ರೇಕ್ಷಕರೊಂದಿಗೆ ವಿಶ್ಲೇಷಿಸಿದರು. ತ

ದನಂತರ ಅವರು ಡಾ. ಯೆನೆಪೋಯ ಅಬ್ದುಲ್ಲಾ ಕುಂಙಿ, ಕುಲಪತಿಗಳು, ಡಾ. ಎಮ್. ವಿಜಯ ಕುಮಾರ್, ಉಪಕುಲಪತಿಗಳು, ಡಾ. ರೇಖಾ ಪಿ.ಡಿ., ನಿರ್ದೇಶಕರು, ಯೆನೆಪೋಯ ರಿಸರ್ಚ್ ಸೆಂಟರ್, ಡಾ. ಅರುಣ್ ಎ.ಬಿ. ಪ್ರಾಂಶುಪಾಲರು, ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆಂನ್ಡ್ ಮ್ಯಾನೇಜ್ ಮೆಂಟ್, ಡೀನ್ ಹಾಗೂ ಇನ್ನಿತರ ಸಿಬ್ಬಂದಿಯೊಂದಿಗೆ ಮಾತನಾಡಿದರು. ಅವರು ಯೆನೆಪೋಯ ಟೆಕ್ನೋಲಜಿ ಇಂಕ್ಯೂಬೇಟರ್ ಹಾಗೂ ಸಿಮ್ಯೂಲೇಶನ್ ಸೆಂಟರ್ಗೆ ಭೇಟಿ ನೀಡಿದರು.


Spread the love