
ಬಿಕರ್ನಕಟ್ಟೆಯ ಪುಣ್ಯಕ್ಷೇತ್ರದಲ್ಲಿ ಬಾಲ ಯೇಸುವಿನ ವಾರ್ಷಿಕ ಮಹೋತ್ಸವ ಆಚರಣೆ
ಬಿಕರ್ನಕಟ್ಟೆಯ ಕಾರ್ಮೆಲ್ ಹಿಲ್ ಬಾಲ ಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜನವರಿ 14 ಶನಿವಾರದಂದು ವಿಜೃಂಭಣೆಯಿಂದ ನೆರವೇರಿತು.
ಪ್ರಥಮ ದಿನದ ಮಹೋತ್ಸವದಲ್ಲಿ ಅನೇಕ ಭಕ್ತಾದಿಗಳು ಪಾಲ್ಗೊಂಡು ಬಾಲ ಯೇಸುವಿನ ಕ್ರೃಪಾ ಪಾತ್ರರಾದರು. ಜನವರಿ 14ರಂದು ಬೆಳಿಗ್ಗೆ 10.30 ಗಂಟೆಗೆ ಮಂಗಳೂರಿನ ಎಪಿಸ್ಕೊಪಲ್ ವಿಕಾರ್ ವಂದನೀಯ ಡೇನಿಯಲ್ ವೇಗಸ್ರವರ ಉಪಸ್ಥಿತಿಯಲ್ಲಿ ಹಾಗೂ ಸಂಜೆ 6 ಗಂಟೆಗೆ ದೆಹಲಿಯ ಸಹಾಯಕ ಧರ್ಮಾಧ್ಯಕ್ಷರಾದ ವಂದನೀಯ ದೀಪಕ್ ವಲೇರಿಯನ್ ತಾವ್ರೊ ನೇತೃತ್ವದಲ್ಲಿ ಮಹೋತ್ಸವದ ಸಂಭ್ರಮದ ಬಲಿಪೂಜೆಗಳು ನೆರವೇರಿದವು. ಅನೇಕ ಯಾಜಕರು, ಕನ್ಯಾಸ್ತ್ರೀಯರ ಜತೆಗೂಡಿ ಅನೇಕ ಭಕ್ತ ವಿಶ್ವಾಸಿಗಳು ಈ ಬಲಿಪೂಜೆಗಳಲ್ಲಿ ಭಾಗವಹಿಸಿದರು.
ಕಳೆದ ಒಂಬತ್ತು ದಿನಗಳ ಕಾಲ ನವೇನಾ ಪ್ರಾರ್ಥನಾವಿಧಿಗಳು ಇಲ್ಲಿ ನೆರೆದಿದ್ದು ವಿವಿಧ ಭಾಷೆಗಳಲ್ಲಿ ಬಲಿಪೂಜೆಗಳು, ಪ್ರವಚನಗಳು ನಡೆದವು. ಪ್ರತಿದಿನ ಅನ್ನ ಸಂತರ್ಪಣೆ ಏರ್ಪಡಿಸಿದ್ದು ಅನೇಕ ಭಕ್ತಾದಿಗಳು ಪುಣ್ಯಕ್ಷೇತ್ರಕ್ಕೆ ಭೇಟಿಯಿತ್ತು ಪ್ರಾರ್ಥಿಸಿದರು.