ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ದಂಪತಿಗಳಿಗಾಗಿ ವಿಶೇಷ ಪ್ರಾರ್ಥನೆ

Spread the love

ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ದಂಪತಿಗಳಿಗಾಗಿ ವಿಶೇಷ ಪ್ರಾರ್ಥನೆ

ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ನವೇನಾ ಪೂಜಾರ್ಪಣೆಯ ನಾಲ್ಕನೇ ದಿನದಂದು, ಭಾನುವಾರ ದಂಪತಿಗಳಿಗಾಗಿ ವಿಶೇಷ ಪ್ರಾರ್ಥನಾ ವಿಧಿಗಳು ನಡೆದವು.

ದಂಪತಿಗಳು, ತಾವು ಆತ್ಮದಲ್ಲಿ ಪರಿಶುದ್ಧರಾಗಿ ಬೆಳೆದು, ಸದ್ಗುಣಗಳನ್ನು ದ್ವಿಗುಣಗೊಳಿಸಿ, ಅವನ್ನು ತಮ್ಮ ಮಕ್ಕಳಲ್ಲಿ ಯಥೇಚ್ಛವಾಗಿ ಬೆಳೆಸಲು ಪಣತೊಡುವಂತೆ ಪ್ರವಚನ ಮಾಡಲಾಯಿತು.

ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ಯೇಸುಬಾಲರಲ್ಲಿ ತಮ್ಮ ಸಮಸ್ಯೆಗಳನ್ನು ಅವಲತ್ತುಕೊಂಡು ಪ್ರಾರ್ಥಿಸಿದರು. ಮಧ್ಯಾಹ್ನ ಪರಮ ಪ್ರಸಾದದ ಆರಾಧನೆ ನೆರವೇರಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯ ಏರ್ಪಾಡು ಮಾಡಲಾಗಿತ್ತು.

ಜನವರಿ 5 ರಿಂದ 13ರ ತನಕ ಮುಂಜಾನೆ 6.00 ಘಂಟೆಯಿಂದ ಮೊದಲುಗೊಂಡು ಸಂಜೆ 7.00ರವರೆಗೆ ಕೊಂಕಣಿ, ಇಂಗ್ಲಿಷ್, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರಂತರವಾಗಿ ಪೂಜಾವಿಧಿಗಳು ನಡೆಯುವುವು. ಜನವರಿ 14 ಹಾಗೂ 15 ರಂದು ಮಹೋತ್ಸವ ನಡೆಯಲಿರುವುದು.

Photo Album 


Spread the love

Leave a Reply

Please enter your comment!
Please enter your name here