ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವ್ಯಾಧಿಷ್ಟರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಕೆ

Spread the love

ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವ್ಯಾಧಿಷ್ಟರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಕೆ

 ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಎಂಟನೇ ದಿನದ ನವೇನಾ ಪೂಜಾರ್ಪಣೆಗಳು ಹಾಗೂ ವ್ಯಾಧಿಷ್ಟರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.

ದಿನವಿಡೀ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಬಲಿಪೂಜೆಗಳಲ್ಲಿ ಹಾಗೂ ಪರಮ ಪ್ರಸಾದದ ಆರಾಧನೆಯಲ್ಲಿ ಭಾಗಿಯಾದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯ ಏರ್ಪಾಡು ಮಾಡಲಾಗಿತ್ತು.

ಜನವರಿ 13ರ ತನಕ ಮುಂಜಾನೆ 6.00 ಘಂಟೆಯಿಂದ ಸಂಜೆ 7.15 ರವರೆಗೆ ಕೊಂಕಣಿ, ಇಂಗ್ಲಿಷ್, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರಂತರವಾಗಿ ಪೂಜಾವಿಧಿಗಳು ನಡೆಯುವುವು. ಜನವರಿ 14 ಹಾಗೂ 15 ರಂದು ಮಹೋತ್ಸವ ನಡೆಯಲಿರುವುದು.

Photo Album


Spread the love

Leave a Reply

Please enter your comment!
Please enter your name here