ಬಿಕರ್ನಕಟ್ಟೆ ಬಳಿ ಲಾರಿ – ಬೈಕ್‌ ನಡುವೆ ಅಪಘಾತ – ಸವಾರ ಸ್ಥಳದಲ್ಲೇ ಸಾವು

Spread the love

ಬಿಕರ್ನಕಟ್ಟೆ ಬಳಿ ಲಾರಿ – ಬೈಕ್‌ ನಡುವೆ ಅಪಘಾತ – ಸವಾರ ಸ್ಥಳದಲ್ಲೇ ಸಾವು

ಮಂಗಳೂರು: ಬಿಕರ್ನಕಟ್ಟೆ ಸಮೀಪ ಲಾರಿಯೊಂದು ಢಿಕ್ಕಿಯಾದ ಪರಿಣಾಮ ಬೈಕ್‌ ಸವಾರ  ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಮೃತ ವ್ಯಕ್ತಿಯನ್ನು ಉಳಾಯಿಬೆಟ್ಟು ನಿವಾಸಿ, ಬಸ್ ಚಾಲಕ ದಯಾನಂದ್ (35)   ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ ದಯಾನಂದ್ ಅವರು ಮಂಗಳವಾರ ಸಂಜೆ ಕೆಲಸ ಮುಗಿಸಿ ನಂತೂರಿನಿಂದ ವಾಮಂಜೂರು ಕಡೆಗೆ ತೆರಳುತ್ತಿರುವಾಗ ಬಿಕರ್ನಕಟ್ಟೆ ಜಂಕ್ಷನ್ ನಲ್ಲಿ ಹಿಂದಿನಿಂದ ಬರುತ್ತಿದ್ದ ಲಾರಿ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಲಾರಿಯು ಸ್ಕೂಟರ್‌ನ್ನು ಸ್ವಲ್ಪ ದೂರಕ್ಕೆ ಎಳೆದುಕೊಂಡು ಹೋಗಿದ್ದು, ಗಂಭೀರವಾಗಿ ಗಾಯಗೊಂಡ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ನಗರ ಪೂರ್ವ (ಕದ್ರಿ) ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love