ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಎರಡನೇ ದಿನದ ಬಲಿಪೂಜೆ ನೊವೆನಾ-ಪ್ರಾರ್ಥನೆಗಳು

Spread the love

ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಎರಡನೇ ದಿನದ ಬಲಿಪೂಜೆ ನೊವೆನಾ-ಪ್ರಾರ್ಥನೆಗಳು

ಮಂಗಳೂರು: ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಎರಡನೇ ದಿನದ ಬಲಿಪೂಜೆಗಳು ಮತ್ತು ನೊವೆನ-ಪ್ರಾರ್ಥನೆಗಳು ಇಂದು ಜನವರಿ 6ರಂದು ನಡೆದವು.

ವಂ. ಗುರು ಐವನ್ ಡಿ’ಸೋಜ ಮೊದಲನೆಯ ಪೂಜೆ ಅರ್ಪಿಸಿದರು. ಇಂದು ವಿಶೇಷವಾಗಿ ಪ್ರಪಂಚದಲ್ಲಿ ಸಮಧಾನ ಮತ್ತು ಶಾಂತಿಯಿಂದ ನೆಲೆಸುವುದಕೋಸ್ಕರ ವಿಶೇಷವಾಗಿ ಪ್ರಾರ್ಥಿಸಿದರು.

ವಂ. ಗುರು ಡಾ| ಆರ್ಚಿಭಾಲ್ಡ್ ಗೊನ್ಸಾಲ್ವಿಸ್, ವಂ. ಗುರು ಪ್ಯಾಟ್ರಿಕ್ ಲೋಬೊ, ವಂ. ಗುರು ಕ್ಲಿಫರ್ಡ್ ಪಿಂಟೊ, ವಂ. ಗುರು ಜೋಯ್ , ವಂ. ಗುರು ಅರುಣ್ , ವಂ. ಗುರು ಜೋನ್ ಲೋಬೊ ಪೂಜೆ ಅರ್ಪಿಸಿದರು.

ಸಹಸ್ರಾರು ಭಕ್ತಾಧಿಗಳು ಬಂದು ಭಾಗವಹಿಸಿದರು. ಪ್ರಾರ್ಥನಾ ವಿಧಿಗಳಲ್ಲಿ ಕೊರೋನಾ ನಿಮಿತ್ತ ಇರುವ ನಿಯಮಗಳನ್ನು ಪಾಲಿಸಿದರು.

ಬೆಳಿಗ್ಗೆ 6 ಗಂಟೆಯಿಂದ ಸಂಜೆ 7ರ ವರೆಗೆ ಕೊಂಕಣಿ, ಇಂಗ್ಲಿಷ್, ಕನ್ನಡ ಮತ್ತು ಮಳಯಾಳಂ ಭಾಷೆಗಳಲ್ಲಿ ನೊವೆನ ಬಲಿಪೂಜೆಗಳು ನಡೆದವು.


Spread the love