ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಮೊದಲ ದಿನದ ಬಲಿಪೂಜೆ ನೊವೆನ-ಪ್ರಾರ್ಥನೆಗಳು

Spread the love

ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಮೊದಲ ದಿನದ ಬಲಿಪೂಜೆ ನೊವೆನ-ಪ್ರಾರ್ಥನೆಗಳು

ಮಂಗಳೂರು: ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಪ್ರಥಮ ದಿನದ ಬಲಿಪೂಜೆಗಳು ಮತ್ತು ನೊವೆನ-ಪ್ರಾರ್ಥನೆಗಳು ಇಂದು ಜನವರಿ 5ರಂದು ಪ್ರಾರಂಭವಾದವು. ವಂ. ಸ್ವಾಮಿ ಚಾರ್ಲ್ಸ್ ಸೆರಾವೊ ಮೊದಲನೆಯ ಪೂಜೆ ಅರ್ಪಿಸಿದರು.

ಇಂದು ವಿಶೇಷವಾಗಿ ಯುವಕರಿಗೆ ಪ್ರಾರ್ಥಿಸಿದರು. ವಂ. ಗುರು ಗ್ರೆಗೊರಿ ಡಿ’ಸೋಜ, ವಂ. ಗುರು ರೂಪೆಶ್- ಬೋಂದೆಲ್, ವಂ. ಗುರು ವಿಲ್ಫ್ರೆಡ್ ರೊಡ್ರಿಗಸ್, ವಂ. ಗುರು ಜೋಸೆಫ್ ಡಿ’ಸೋಜ, ವಂ. ಗುರು ಲ್ಯಾನ್ಸಿ ಮೆಂಡನ್ಸಾ, ವಂ. ಗುರು ವಿಜಯ್ ಮಚಾದೊ ಪೂಜೆ ಅರ್ಪಿಸಿದರು.

ಸಹಸ್ರಾರು ಭಕ್ತಾಧಿಗಳು ಬಂದು ಭಾಗವಹಿಸಿದರು. ಪ್ರಾರ್ಥನಾ ವಿಧಿಗಳಲ್ಲಿ ಕೊರೋನಾ ನಿಮಿತ್ತ ಇರುವ ಕಾನೂನುಗಳನ್ನು ಪಾಲಿಸಿದರು.

ಬೆಳಿಗ್ಗೆ 6 ಗಂಟೆಯಿಂದ ಸಂಜೆ 7ರ ವರೆಗೆ ಕೊಂಕಣಿ, ಇಂಗ್ಲಿಷ್, ಕನ್ನಡ ಮತ್ತು ಮಳಯಾಳಂ ಬಾಷೆಗಳಲ್ಲಿ ನೊವೆನ ಬಲಿಪೂಜೆಗಳು ನಡೆದವು.


Spread the love