ಬಿಕರ್ನಕಟ್ಟೆ, ಬಿಜೈ, ಭಾರತಿನಗರದಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ವಿತರಣೆ

Spread the love

ಬಿಕರ್ನಕಟ್ಟೆ, ಬಿಜೈ, ಭಾರತಿನಗರದಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ವಿತರಣೆ

ಮಂಗಳೂರು: ಬಿಜೈ ಭಾರತಿನಗರದ ಶ್ರೀ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದ ಸಭಾಂಗಣದಲ್ಲಿ ಕಾಂಗ್ರೆಸ್ ವತಿಯಿಂದ ಕೋವಿಡ್ ಸಂತ್ರಸ್ತರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ಮಾತನಾಡುತ್ತ, ಕೋವಿಡ್ ಲಾಕ್ ಡೌನ್ ನಿಂದಾಗಿ ಜನರು ಬಹಳಷ್ಟು ಸಂಕಷ್ಟಕ್ಕೆ ಇಡಾಗಿದ್ದಾರೆ. ಕೆಲಸವಿಲ್ಲದೇ ಜನರು ಜೀವನ ಸಾಗಿಸಲು ಕಷ್ಟಪಡುತ್ತಿದ್ದಾರೆ.ಇಂದು ಬಡ ಜನರಿಗೆ ಸಹಾಯ ಮಾಡಲು ಕಾಂಗ್ರೆಸ್ ಪಕ್ಷ ಮುಂದೆ ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ದೈವಸ್ಥಾನದ ಗುರಿಕಾರರಾದ ಉಮಾನಾಥ,ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಟಿ. ಕೆ. ಸುಧೀರ್, ನೀರಜ್ ಪಾಲ್,ಪ್ರೇಮ್ ಬಲ್ಲಾಳ್ ಬಾಗ್,ಉದಯ ಕುಂದರ್,ರಮಾನಂದ ಪೂಜಾರಿ,ದೇವಿಪ್ರಸಾದ್, ಕ್ರತಿನ್ ಕುಮಾರ್,ರಘುರಾಜ್ ಕದ್ರಿ, ಲಿಯಾಖತ್ ಶಾ, ಯಶವಂತ ಪ್ರಭು,ಪ್ರಥ್ವಿ, ಅಶೋಕ್, ಆಸ್ಟನ್,ಶಾನ್ ಡಿಸೋಜಾ, ಪ್ರಕಾಶ್ ಕೋಡಿಕಲ್, ವಿಕಿತ್ ಶೆಟ್ಟಿ, ವಸಂತಿ ಮೊದಲಾದವರು ಉಪಸ್ಥಿತರಿದ್ದರು.

ಬಿಕರ್ನಕಟ್ಟೆ ಯಲ್ಲಿ ಬಡ ಆಟೋ ರಿಕ್ಷಾ ಚಾಲಕರಿಗೆ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ವಿತರಣೆ 

ಕೋವಿಡ್ ಲಾಕ್ ಡೌನ್ ನಿಂದ ತೀವ್ರ ತೊಂದರೆಗೆ ಒಳಗಾದ ಸ್ಥಳೀಯ ಬಡ ಆಟೋ ರಿಕ್ಷಾ ಚಾಲಕರಿಗೆ ಕಾಂಗ್ರೆಸ್ ವತಿಯಿಂದ ದಿನ ಸಾಮಗ್ರಿಗಳ ಕಿಟ್ ಗಳನ್ನು ಬಿಕರ್ನಕಟ್ಟೆಯ ಬಾಲ ಯೇಸು ಮಂದಿರದ ಬಳಿ ವಿತರಿಸಲಾಯಿತು.


ಮಾಜಿ ಶಾಸಕರಾದ ಜೆ. ಆರ್. ಲೋಬೊರವರ ನೇತೃತ್ವದಲ್ಲಿ ಫಾ.ಚಾರ್ಲ್ಸ್ ಸೆರಾವೊ ಹಾಗೂ ಫಾ. ರೋವಿನ್ ಡಿಸೋಜಾ ರವರು ವಿತರಿಸಿದರು.

ಈ ಸಂದರ್ಭದಲ್ಲಿ ಮರೋಳಿ ವಾರ್ಡ್ ಕಾರ್ಪೊರೇಟರ್ ಕೇಶವ ಮರೋಳಿ, ವಾರ್ಡ್ ಅಧ್ಯಕ್ಷ ಗಂಗಾಧರ್ ಪೂಜಾರಿ, ಟಿ. ಕೆ. ಸುಧೀರ್, ನೀರಜ್ ಪಾಲ್, ರಮಾನಂದ್ ಪೂಜಾರಿ, ಜೋಯ್ ಕ್ರಾಸ್ತಾ, ಉದಯ್ ಕುಂದರ್, ಯಶವಂತ ಪ್ರಭು, ಗೌತಮ್, ಶಾನ್ ಡಿಸೋಜಾ, ಆಸ್ಟನ್ ಸಿಕ್ವೇರಾ, ಅಶೋಕ್, ರೋಷನ್ ಮೊದಲಾದವರು ಉಪಸ್ಥಿತರಿದ್ದರು.


Spread the love