
Spread the love
ಬಿಜೆಪಿಗರಿಗಿಂತ ಹೆಚ್ಚು ಮೋದಿಯನ್ನು ಹೊಗಳುತ್ತಿರುವ ಪ್ರಮೋದ್ ಮಧ್ವರಾಜರನ್ನು ಸೋಲಿಸಿ – ಸಿದ್ದರಾಮಯ್ಯ
ಉಡುಪಿ: ಬಿಜೆಪಿಗೆ ಹೋದ ಮೇಲೆ ಬಿಜೆಪಿಗರಿಗಿಂತ ಹೆಚ್ಚು ಮೋದಿಯನ್ನು ಹೊಗಳುತ್ತಿರುವ ಪ್ರಮೋದ್ ಮಧ್ವರಾಜ್ ಅವರನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸಿ ಎಂದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.
ಅವರು ಭಾನುವಾರ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ನಾನು ಆತನಿಗೆ ಮಂತ್ರಿ ಮಾಡಿದ್ದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಆತ ಹಣ ಪಡೆದು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ನಿಂತು, ಸೋತ ಬಳಿಕ ಮತ್ತೆ ನನ್ನಲ್ಲಿ ಬಂದು ಕಾಂಗ್ರೆಸ್ ಸೇರುವುದಾಗಿ ಹೇಳಿ ಪಕ್ಷಕ್ಷಕೆ ಸೇರ್ಪಡೆಗೊಂಡು ಇದಿಗ ಮತ್ತೆ ಬಿಜೆಪಿ ಸೇರಿದ್ದಾರೆ. ಅಲ್ಲಿಗೆ ಹೋಗಿ ಆತ ಆರ್ ಎಸ್ ಎಸ್ ಹಾಗೂ ಮೋದಿ ಅವರನ್ನು ಬಿಜೆಪಿಯವರಿಗಿಂತ ಹೆಚ್ಚು ಹೊಗಳುತ್ತಿದ್ದಾರೆ ಅಂಥವರನ್ನು ಈಬಾರಿ ಚುನಾವಣೆಯಲ್ಲಿ ಸೋಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
Spread the love