
ಬಿಜೆಪಿಗರು ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿದ್ದಾರೆ – ಪ್ರಸಾದ್ ರಾಜ್ ಕಾಂಚನ್
ಉಡುಪಿ: ಬಿಜೆಪಿ ಮುಖಂಡರು ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡಿರುವಾಗ ಅಮಿತ್ ಶಾ ರವರು ಕರ್ನಾಟಕಕ್ಕೆ ಬಂದು ಕಾಂಗ್ರೆಸ್ ಪಕ್ಷದೊಂದಿಗೆ ದಾಖಲೆ ಕೇಳಲು ಯಾವ ನೈತಿಕತೆ ಇದೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಪ್ರಶ್ನಿಸಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ ಪ್ರಶಾಂತ್ ನಿಯೋಜನೆಯ ಮೇರೆಗೆ ಬೆಂಗಳೂರು ಜಲಮಂಡಳಿಯಲ್ಲಿ ಮುಖ್ಯ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತಿದ್ದ ಕೆ ಎಸ್ ಡಿ ಎಲ್ ಗೆ ರಾಸಾಯನಿಕ ಪೂರೈಕೆ ಆಯ್ಕೆಯಾಗಿರುವ ಗುತ್ತಿಗೆದಾರರಿಂದ 80ಲಕ್ಷ ರೂ ಲಂಚದ ಬೇಡಿಕೆ ಇಟ್ಟಿದ್ದ ಎಂದು ಆರೋಪ ಕೇಳಿ ಬಂದಿದೆ, ಬಿಜೆಪಿ ಸರ್ಕಾರದಲ್ಲಿ ವಿಧಾನಸೌದ ವ್ಯಾಪಾರ ಸೌದವಾಗಿದೆ ಎಂದು ಕಾಂಗ್ರೆಸ್ ಹೇಳುತ್ತ ಬಂದರೂ ಈ ಬಗ್ಗೆ ಸಾಕ್ಷಿ ಏನಿದೆ ಎಂದು ಸರ್ಕಾರ ಆರೋಪವನ್ನು ತಿರಸ್ಕರಿಸುತ್ತಾ ಬಂದಿತ್ತು.
ದೇಶದ ಅತ್ಯಂತ ಭ್ರಷ್ಟ ಸರ್ಕಾರ ಎಂದು ಹೇಳಲಾಗುತ್ತಿದು ಇದು ಸಾಬೀತಾಗಿದೆ, ನೋಟು ರದ್ದತಿ ಮಾಡಿ ಹಣ ನಿರ್ಮೂಲನ ಮಾಡಿದ್ದೇವೆ ಎನ್ನುವ ಬಿಜೆಪಿ ಮುಖಂಡರಲ್ಲಿಯೇ ಇಷ್ಟೊಂದು ಹಣ ಇರಲು ಹೇಗೆ ಸಾಧ್ಯ ಮುಂದುವರೆದ ದಾಳಿಯಿಂದ 6 ಕೋಟಿ ಹೆಚ್ಚುವರಿಯಾಗಿ ಸಿಕ್ಕಿದೆ ಇವರ ಬಳಿಯೇ ಇಷ್ಟು ಸಿಗಬೇಕಾದರೆ ಇವರಿಂದ ಉನ್ನತ ಮಟ್ಟದಲ್ಲಿ ಇರುವವರ ಬಳಿ ಎಷ್ಟಿರಬೇಡ.
ಡಿಮಾನಿಟೈಸೆನ್ ನಂತರ ನಗದು ವ್ಯವಹಾರ ಎಲ್ಲಾ ರದ್ದಾಗಿದೆ, ಭ್ರಷ್ಟಾಚಾರ ಬುಡಸಮೇತ ಕಿತ್ತೊಗಿದೆ ಎಂದೆಲ್ಲಾ ಬುರುಡೆ ಬಿಡುತ್ತಿದರು, ಬಿಜೆಪಿ ಮುಖಂಡರ ಮನೆ ಹಾಗೂ ಕಚೇರಿಗಳಲ್ಲಿ 8ಕೋಟಿಗಿಂತಲೂ ಹೆಚ್ಚು ಭ್ರಷ್ಟಾಚಾರದ ಹಣ ಸಿಕ್ಕಿದೆ, ಕೆಲದಿನಗಳ ಹಿಂದೆ ರಾಜ್ಯಕೆ ಬಂದಿದ್ದ ಅಮಿತ್ ಶಾ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಇನೊಂದು ಅವಕಾಶ ಕೊಡಿ ಅಂತ ಕೇಳಿದ್ದು ಈ ಅವಧಿಯಲ್ಲಿ ಸರ್ಕಾರದಲ್ಲಿ ಭ್ರಷ್ಟಾಚಾರ ಇತ್ತು ಎಂದು ಒಪ್ಪಿದಂತೆ ಆಗಿದೆ.
ಬಿಜೆಪಿ ಶಾಸಕ ಮಾಡಳ ವಿರೂಪಾಕ್ಷಪ್ಪಾ ಪುತ್ರ ಪ್ರಶಾಂತ್ ಮನೆಯಲ್ಲಿ 1.62ಕೋಟಿ ಹಣ ಪತ್ತೆಯಾಗಿದ್ದು ನಿಜವಾಗಿಯೂ ಸರ್ಕಾರ 40% ಕಮಿಷನ್ ಪಡೆಯುತ್ತಿರುವುದು ಸಾಬೀತಾಗಿದೆ, ಸರ್ಕಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪ್ರಶಾಂತ್ ಮಾಡಳ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ, ಬಿಜೆಪಿ ಮುಖಂಡರು ವಿಧಾನ ಸೌಧವನ್ನು ವ್ಯಾಪಾರಸೌಧ ಮಾಡಿರುವಾಗ ಅಮಿತ್ ಶಾ ರವರು ಕರ್ನಾಟಕಕ್ಕೆ ಬಂದು ಕಾಂಗ್ರೆಸ್ ಪಕ್ಷದೊಂದಿಗೆ ದಾಖಲೆ ಕೇಳಲು ಯಾವುದೇ ನೈತಿಕತೆ ಇಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.