ಬಿಜೆಪಿಗರೇ ಸೊರಕೆಯವರ ಮೇಲೆ ಆರೋಪ ಮಾಡುವುದನ್ನು ಬಿಟ್ಟು ಮೊದಲು ಅಭಿವೃದ್ಧಿ ಮಾಡಿ ತೋರಿಸಿ – ಮೆಲ್ವಿನ್‌ ಡಿʼಸೋಜಾ

Spread the love

ಬಿಜೆಪಿಗರೇ ಸೊರಕೆಯವರ ಮೇಲೆ ಆರೋಪ ಮಾಡುವುದನ್ನು ಬಿಟ್ಟು ಮೊದಲು ಅಭಿವೃದ್ಧಿ ಮಾಡಿ ತೋರಿಸಿ – ಮೆಲ್ವಿನ್‌ ಡಿʼಸೋಜಾ

ಉಡುಪಿ: ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆಯವರ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ನೀಡಿರುವ ಹೇಳಿಕೆಯನ್ನು ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ನ್ಯಾಯವಾದಿ ಮೆಲ್ವಿನ್‌ ಡಿʼಸೋಜಾ ತೀವ್ರವಾಗಿ ಖಂಡಿಸಿದ್ದಾರೆ.

ವಿನಯ್‌ ಕುಮಾರ್‌ ಸೊರೆಕೆಯವರು ಕಾಪು ಕ್ಷೇತ್ರದ ಶಾಸಕರಾಗಿ ಅನೇಕ ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದು, ಅವರು ಮಾಡಿದ ಅಭಿವೃದ್ಧಿಯನ್ನು ಯಾರೂ ಮರೆ ಮಾಚುವಂತಿಲ್ಲ. ವಿನಯ್‌ ಕುಮಾರ್‌ ಸೊರಕೆಯವರು ಶಾಸಕರಾಗಿದ್ದ ಸಂದರ್ಭದಲ್ಲಿ ಪ್ರತಿ ಗ್ರಾಮ ಪಂಚಾಯತ್‌ ಗೆ ಮೂರು ತಿಂಗಳಿಗೊಮ್ಮೆ ಭೇಟಿ ನೀಡಿ ಸರಕಾರದ ಸವಲತ್ತುಗಳನ್ನು ಪಂಚಾಯತ್‌ ಮಟ್ಟದಲ್ಲಿಯೇ ಜನರಿಗೆ ಒದಗಿಸುವ ಕೆಲಸವನ್ನು ಮಾಡಿದ್ದರು. ಪಿಂಚಣಿ ಯೋಜನೆ, ಹೊಸ ಮನೆಗೆ ಸರಕಾರಿ ಸಹಾಯ ಧನ ಒದಗಿಸುವಲ್ಲಿ ಅವಿರತ ಪ್ರಯತ್ನ ಮಾಡಿದ್ದು, ಅವರ ಅವಧಿಯ್ಲಲಿ ಅಭಿವೃದ್ಧಿಯ ಮಹಾಪೂರವೇ ಆಗಿತ್ತು.

ಆದರೆ ಈಗ ಪಂಚಾಯತ್‌ ಭೇಟಿಯಾಗಲಿ, ಹೊಸ ಮನೆಯಾಗಲಿ, ಮನೆ ಕಟ್ಟಲು ಧನಸಹಾಯ ಪ್ರತಿಯೊಂದು ಕೂಡ ನಿಂತು ಹೋಗಿದೆ. ರಸ್ತೆಯ ಅಭಿವೃದ್ಧೀ ಕಾರ್ಯಗಳು ನಿಂತು ಹೋಗಿದೆ. ಜನರು ವಿನಯ್‌ ಕುಮಾರ್‌ ಸೊರಕೆಯ ಕಾರ್ಯವನ್ನು ನೆನಪಿಸುವ ಕಾಲ ಬಂದಿದೆ. ಅವರು ಮತ್ತೊಮ್ಮೆ ಕಾಪು ಕ್ಷೇತ್ರದ ಶಾಸಕರಾಗಿ ಅಯ್ಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಬಿಜೆಪಿಯವರು ವಿನಾಕಾರಣ ನಮ್ಮ ನಾಯಕರ ಮೇಲೆ ಆರೋಪ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಮೆಲ್ವಿನ್‌ ಡಿಸೋಜಾ ಆಗ್ರಹಿಸಿದ್ದಾರೆ.


Spread the love