Home Mangalorean News Kannada News ಬಿಜೆಪಿಯು ಯಾವಾಗಲೂ ಅಲ್ಪಸಂಖ್ಯಾತರ ಪರ : ನಳಿನ್ ಕುಮಾರ್ ಕಟೀಲ್

ಬಿಜೆಪಿಯು ಯಾವಾಗಲೂ ಅಲ್ಪಸಂಖ್ಯಾತರ ಪರ : ನಳಿನ್ ಕುಮಾರ್ ಕಟೀಲ್

Spread the love

ಬಿಜೆಪಿಯು ಯಾವಾಗಲೂ ಅಲ್ಪಸಂಖ್ಯಾತರ ಪರ : ನಳಿನ್ ಕುಮಾರ್ ಕಟೀಲ್

ಮಂಗಳೂರು: ದ.ಕ.ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕಾರಿಣಿ ಸಭೆಯು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆಯಿತು.

ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಕಾರ್ಯಕಾರಿಣಿ ಉದ್ಘಾಟಿಸಿ, ಭಾರತೀಯ ಜನತಾ ಪಾರ್ಟಿಯ ಮೋರ್ಚಾಗಳಲ್ಲಿ ಅಲ್ಪಸಂಖ್ಯಾತ ಮೋರ್ಚಾವು ಬಲಿಷ್ಠವಾಗಬೇಕು. ಅಲ್ಪಸಂಖ್ಯಾತ ಮತ್ತು ಬಹು ಸಂಖ್ಯಾತರು ಎಂಬ ಭಾವನೆ ಬಿಜೆಪಿಯಲ್ಲಿಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಕ್ಫ್ ಸಮಿತಿಗೆ ಅತೀ ಹೆಚ್ಚಿನ ಅನುದಾನ ನೀಡುವುದರೊಂದಿಗೆ ಕ್ರೈಸ್ತ ರಿಗೆ ಕ್ರೈಸ್ತ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿ ರೂ.50.00ಕೋಟಿಯನ್ನು ಮೀಸಲಿಟ್ಟಿದ್ದರು. ಬಿಜೆಪಿಯು ಯಾವಾಗಲೂ ಅಲ್ಪಸಂಖ್ಯಾತರ ಪರವಾಗಿದೆ ಎಂದು ಹೇಳಿದರು.

ಮಂಗಳೂರು ಸ್ಮಾರ್ಟ್ ಸಿಟಿ ಮತ್ತು ಅಮೃತ ಯೋಜನೆ ತರಲು ನೇತೃತ್ವ ವಹಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ರವರನ್ನು ಈ ವೇಳೆ ಸನ್ಮಾನಿಸಲಾಯಿತು.

bjp-minority-morcha

ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಜೋಯ್ಲಸ್ ಡಿ ಸೋಜಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕ್ಯಾ|ಬ್ರಿಜೇಶ್ ಚೌಟ, ಸುದರ್ಶನ್ ಎಂ., ಮಾಜಿ ಶಾಸಕ ಯೋಗೀಶ್ ಭಟ್, ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ರಹೀಂ ಉಚ್ಚಿಲ್, ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಬೈಕಂಪಾಡಿ, ಮಂ.ನ.ದಕ್ಷಿಣ ಮಂಡಲ ಅಧ್ಯಕ್ಷ ವೇದವ್ಯಾಸ ಕಾಮತ್, ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ಮುಂತಾದವರು ಉಪಸ್ಥಿತರಿದ್ದರು.

ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮುನೀರ್ ಬಾವ ಸ್ವಾಗತಿಸಿ, ಅಬ್ದುಲ್ ಅಜೀಜ್ ಫ್ಯಾನ್ಸಿ ಧನ್ಯವಾದಗೈದರು. ಸಂತೋಷ್ ಲೋಬೊ ಗುರುಪುರ ಮತ್ತು ಜೋಕಿಂ ಡಿ ಕೋಸ್ತ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version