ಬಿಜೆಪಿ ಗೆಲ್ಲಿಸಲು ಉಡುಪಿ ಮತದಾರರಿಂದಲೇ ಸಂಕಲ್ಪ : ಯಶ್ಪಾಲ್ ಸುವರ್ಣ

Spread the love

ಬಿಜೆಪಿ ಗೆಲ್ಲಿಸಲು ಉಡುಪಿ ಮತದಾರರಿಂದಲೇ ಸಂಕಲ್ಪ : ಯಶ್ಪಾಲ್ ಸುವರ್ಣ

ಉಡುಪಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಉಡುಪಿ ವಿಧಾನ ಸಭಾ ಕ್ಷೇತ್ರದ ಮತದಾರಾರರೇ ಸಂಕಲ್ಪ ಮಾಡಿದ್ದಾರೆ. ಉಡುಪಿ ಕ್ಷೇತ್ರದಲ್ಲಿ ಮತ್ತೊಮ್ಮೆ ಮತದಾರರ ಆಶೀರ್ವಾದ ಮತ್ತು ಕಾರ್ಯಕರ್ತರ ಪರಿಶ್ರಮದಿಂದ ಪ್ರಚಂಡ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಹೇಳಿದರು.

ಉಡುಪಿ ನಗರ ಸಭೆಯ ವಿವಿಧ ವಾರ್ಡ್ಗಳಲ್ಲಿ ಮಹಾ ಅಭಿಯಾನದ ಅಂಗವಾಗಿ ಶಾಸಕ ರಘುಪತಿ ಭಟ್, ನಗರ ಸಭಾ ಸದಸ್ಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮನೆ ಮನೆ ಭೇಟಿ ಮಾಡಿ ಮತ ಯಾಚನೆ ಮಾಡಿದ ಸಂದರ್ಭದಲ್ಲಿ ಮಾತನಾಡಿದರು.

ಶಾಸಕ ಕೆ. ರಘುಪತಿ ಭಟ್ ಮಾತನಾಡಿ ಉಡುಪಿಯ ಸಮಗ್ರ ಅಭಿವೃದ್ಧಿಗೆ ಇನ್ನಷ್ಟು ವೇಗ ತುಂಬುವ ನಿಟ್ಟಿನಲ್ಲಿ ಕ್ರಿಯಾಶೀಲ ಅಭ್ಯರ್ಥಿ ಯಶ್ ಪಾಲ್ ಸುವರ್ಣ ರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ನಗರ ಸಭಾ ಸದಸ್ಯರಾದ  ರಶ್ಮಿ ಸಿ.ಭಟ್, ಟಿ ಜಿ ಹೆಗ್ಡೆ,  ಸವಿತಾ ಹರೀಶ್ ರಾಮ್,  ಗಿರೀಶ್ ಅಂಚನ್,   ಗೀತಾ ಶೇಟ್,   ಭಾರತಿ ಪ್ರಶಾಂತ್, ಪ್ರಭಾಕರ ಪೂಜಾರಿ, ಸಂತೋಷ್ ಜತ್ತನ್, ಬಾಲಕೃಷ್ಣ ಶೆಟ್ಟಿ, ಕಲ್ಪನಾ ಸುಧಾಮ, ವಿಜಯ ಲಕ್ಷ್ಮೀ, ಗಿರಿಧರ ಆಚಾರ್ಯ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love