ಬಿಜೆಪಿ ಜಿಲ್ಲಾ ಯುವಮೋರ್ಚಾ ನೇತೃತ್ವದಲ್ಲಿ 9 ಲಕ್ಷ ಮೌಲ್ಯದ ಪಿ.ಪಿ.ಇ ಕಿಟ್, ಫಲ್ಸ್ ಆಕ್ಸೀಮೀಟರ್, ಸ್ಯಾನಿಟೈಸರ್, ಮಾಸ್ಕ್, ಫೇಸ್ ಶೀಲ್ಡ್ ವಿತರಣೆ

Spread the love

ಬಿಜೆಪಿ ಜಿಲ್ಲಾ ಯುವಮೋರ್ಚಾ ನೇತೃತ್ವದಲ್ಲಿ 9 ಲಕ್ಷ ಮೌಲ್ಯದ ಪಿ.ಪಿ.ಇ ಕಿಟ್, ಫಲ್ಸ್ ಆಕ್ಸೀಮೀಟರ್, ಸ್ಯಾನಿಟೈಸರ್, ಮಾಸ್ಕ್, ಫೇಸ್ ಶೀಲ್ಡ್ ವಿತರಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 2ನೇ ಅವಧಿಯ 2 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೇವಾ ಹೀ ಸಂಘಟನ್ ಧ್ಯೇಯ ವಾಕ್ಯದಡಿಯಲ್ಲಿ ಬಿಜೆಪಿ ಯುವಮೋರ್ಚಾ ಉಡುಪಿ ಜಿಲ್ಲಾ ವತಿಯಿಂದ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ವಿಖ್ಯಾತ್ ಶೆಟ್ಟಿ ಹಾಗೂ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದರವರ ವೈಯಕ್ತಿಕ ಮೊತ್ತದಲ್ಲಿ ಉಡುಪಿ ಪ್ರೆಸ್ ಕ್ಲಬ್ ಸಿಬ್ಬಂದಿಗಳಿಗೆ ಉಡುಪಿ ಮೆಸ್ಕಾಂ ಸಿಬ್ಬಂದಿಗಳಿಗೆ ಮಣಿಪಾಲದ ಕೋವಿಡ್ ಕೇರ್ ಸೆಂಟರ್ ಕುಂದಾಪುರ ಪೊಲೀಸ್ ಠಾಣೆ ಸಿಬ್ಬಂದಿಗಳಿಗೆ ಹಾಗೂ ಮೆಸ್ಕಾಂ ಸಿಬ್ಬಂದಿಗಳಿಗೆ ಹಾಗೂ ಬೈಂದೂರು ಪೊಲೀಸ್ ಠಾಣೆ ಸಿಬ್ಬಂದಿಗಳಿಗೆ ಹಾಗೂ ಮೆಸ್ಕಾಂ ಸಿಬ್ಬಂದಿಗಳಿಗೆ ಹಾಗೂ ಕಾಪು ಕ್ಷೇತ್ರದ ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆಶಾ ಕಾರ್ಯಕರ್ತರಿಗೆ ಹಾಗೂ ಮೂಡುಬೆಟ್ಟು ಆರೋಗ್ಯ ಕೇಂದ್ರ ಹಾಗೂ ಕಟಪಾಡಿ ಪೊಲೀಸ್ ಠಾಣಾ ಸಿಬ್ಬಂದಿಗಳಿಗೆ ಹಾಗೂ ಕಾರ್ಕಳದ ಕೋವಿಡ್ ಕೇರ್ ಸೆಂಟರ್,ಮೆಸ್ಕಾಂ ಸಿಬ್ಬಂದಿಗಳಿಗೆ ಕಾರ್ಕಳ ಪೊಲೀಸ್ ಠಾಣಾ ಸಿಬ್ಬಂದಿಗಳಿಗೆ ಸುಮಾರು 9 ಲಕ್ಷ ಮೌಲ್ಯದ ಪಿ.ಪಿ.ಇ ಕಿಟ್,ಕೋವಿಡ್ ಡೆಡ್ ಬಾಡಿ ಕಿಟ್,ಫಲ್ಸ್ ಆಕ್ಸೀಮೀಟರ್,ಸ್ಯಾನಿಟೈಸರ್,ಮಾಸ್ಕ್,ಫೇಸ್ ಶೀಲ್ಡ್ ಗಳನ್ನು ವಿತರಿಸಲಾಯಿತು

ಉಡುಪಿ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ವಿಖ್ಯಾತ್ ಶೆಟ್ಟಿ,ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಶೆಟ್ಟಿ ಉಪ್ಪುಂದ ಹಾಗೂ ವಿನೋದ್ ರಾಜ್ ಶಾಂತಿನಿಕೇತನ, ರಾಜ್ಯ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಪ್ರಜ್ವಲ್ ಶೆಟ್ಟಿ,ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾದ ಪ್ರವೀಣ್ ಪೂಜಾರಿ,ಸುಮಿತ್ ನಲ್ಲೂರು,ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಸತೀಶ್ ಪೂಜಾರಿ ಉದ್ಯಾವರ ಹಾಗೂ ಅಭಿರಾಜ್ ಸುವರ್ಣ ಜಿಲ್ಲಾ ಯುವಮೋರ್ಚಾ ಸದಸ್ಯರಾದ ಅವಿನಾಶ್ ಶೆಟ್ಟಿ,ರಾಘವೇಂದ್ರ ಕಾಪು ಯುವಮೋರ್ಚಾ ಅಧ್ಯಕ್ಷರಾದ ಸಚಿನ್ ಸುವರ್ಣ,ಕಾರ್ಯದರ್ಶಿ ಸೋನು ಪಾಂಗಾಳ ಕಾರ್ಕಳ ಯುವಮೋರ್ಚಾ ಅಧ್ಯಕ್ಷರಾದ ಸುಹಾಸ್ ಶೆಟ್ಟಿ ಮುಟ್ಲುಪಾಡಿ ಉಪಸ್ಥಿತರಿದ್ದರು


Spread the love