ಬಿಜೆಪಿ ಭಾವನಾತ್ಮಕ ಮನಸ್ಸುಗಳನ್ನು ಬಳಸಿ ಒಡೆದು ಆಳುವ ನೀತಿ ಅನುಸರಿಸುತ್ತದೆ – ಪದ್ಮರಾಜ್ ರಾಮಯ್ಯ

Spread the love

ಬಿಜೆಪಿ ಭಾವನಾತ್ಮಕ ಮನಸ್ಸುಗಳನ್ನು ಬಳಸಿ ಒಡೆದು ಆಳುವ ನೀತಿ ಅನುಸರಿಸುತ್ತದೆ – ಪದ್ಮರಾಜ್ ರಾಮಯ್ಯ

ಕಾರ್ಕಳ: ಬಿಜೆಪಿ ಪಕ್ಷ ಜನರ ಭಾವನಾತ್ಮಕ ಮನಸ್ಸುಗಳನ್ನು ಬಳಸಿಕೊಂಡು ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಕುದ್ರೋಳಿ ದೇವಾಲಯದ ಕೋಶಾಧಿಕಾರಿ ಕೆಪಿಸಿಸಿ ಮುಖ್ಯ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ ಹೇಳಿದರು. ಅವರು ಕಾರ್ಕಳ ಕಟೀಲು ಇಂಟರ್ ನ್ಯಾಶನಲ್ ಹೋಟೆಲ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.


ಕೇಂದ್ರ ಬಿಜೆಪಿ ಸರ್ಕಾರ ಕೊರೋನ ಪ್ಯಾಕೇಜ್ ಘೋಷಿಸಿದ್ದರು ಅದನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾಗಿದೆ., ಕೇವಲ ಬೆಲೆ ಏರಿಕೆಯನ್ನು ಮಾಡಿಕೊಂಡು ಜನರನ್ನು ದಾರಿತಪ್ಪಿಸಿದೆ. 2018 ರಲ್ಲಿ ಕಾಂಗ್ರೆಸ್ ಸರಕಾರವು 165 ಪ್ರನಾಳಿಕೆಯಲ್ಲಿ ,159 ಪ್ರನಾಳಿಕೆಯನ್ನು ಈಡೇರಿಸಿ ಬಡವರ ಪರವಾಗಿ ನಿಂತಿತ್ತು. ಆದರೆ ಬಿಜೆಪಿ ಪಕ್ಷ ಅಭಿವೃದ್ಧಿ ಮರೆಮಾಚಿದೆ , ಕೇವಲ 40% ಭ್ರಷ್ಟಾಚಾರ ಶ್ರೀರಕ್ಷೆಯಾಗಿಸಿದೆ . ನಾರಾಯಣ ಗುರು ನಿಗಮ ಮಾಡಿ ಅನುದಾನ ನೀಡದೆ ಬಿಲ್ಲವರನ್ನು ಮೋಸಗೊಳಿಸಿದೆ .

ಅಭಿವೃದ್ಧಿ ವಿಚಾರದಲ್ಲಿ ನಾನೊಬ್ಬ ಹಿಂದು ಸನಾತನ ಧರ್ಮ ದಲ್ಲಿರುವವನು , ಆದರೆ ಬಿಜೆಪಿ ಪಕ್ಷದಂತೆ ರಾಜಕೀಯ ಕಚ್ಚಾಟದಲ್ಲಿ ಹಿಂದುತ್ವವನ್ನು ಪಸರಿಸುವಲ್ಲಿ ನಾನಿಲ್ಲ . ನಾರಾಯಣಗುರು ಅವರ ಹಿಂದುತ್ವ ಪ್ರಪಂಚದಲ್ಲಿ ಎಲ್ಲೆಡೆ ಪ್ರಚಲಿತದಲ್ಲಿದೆ, ಎಲ್ಲರೊಂದಿಗೆ ಸಮಬಾಳು ಎಂಬಂತಿದೆ. .ಆದರೆ ಬಿಜೆಪಿ ಹಿಂದುತ್ವ ವೆಂದರೆ ವಿದ್ಯಾರ್ಥಿಗಳು ಕಾನೂನು ಬಾಹಿರ ಹಾಗೂ ಅಸಂಬಿಧಾನಿಕ ಕೃತ್ಯಗಳಿಗೆ ಬಳಸಲಾಗುತ್ತಿದೆ ಎಂದರು.

ಈ ಬಾರಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 135 ಸ್ಥಾನಗಳನ್ನು ಗಳಿಸಲಿದ್ದು ಅಧಿಕಾರದ ಗದ್ದುಗೇರಲಿದೆ . ಕಾರ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ 23000 ಅಂತರಗಳಲ್ಲಿ ವಿಜಯಿಯಾಗಲಿದ್ದಾರೆ ಎಂದರು ..

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಸುಭಿತ್ ಎನ್ ಆರ್, ಯೋಗೀಶ್ ಆಚಾರ್ಯ ಇನ್ನಾ , ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಕೃಷ್ಣ ಶೆಟ್ಟಿ , ಶೇಖರ ಮಡಿವಾಳ , ಸದಾಶಿವ ದೇವಾಡಿಗ , ಸುರೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು .


Spread the love