ಬಿಜೆಪಿ ಶಾಸಕರು ಮಾಧ್ಯಮಗಳ ವಿರುದ್ದ ತಡೆಯಾಜ್ಞೆ ತಂದಿರುವ ಕಾರಣ ಬಹಿರಂಗಪಡಿಸಿ – ವಿನಯ್ ರಾಜ್

Spread the love

ಬಿಜೆಪಿ ಶಾಸಕರು ಮಾಧ್ಯಮಗಳ ವಿರುದ್ದ ತಡೆಯಾಜ್ಞೆ ತಂದಿರುವ ಕಾರಣ ಬಹಿರಂಗಪಡಿಸಿ – ವಿನಯ್ ರಾಜ್

ಮಂಗಳೂರು: ಪುತ್ತೂರು, ಮೂಡಬಿದ್ರೆ ಶಾಸಕರು ಹಾಗೂ ದಕ ಜಿಲ್ಲಾ ಬಿಜೆಪಿ ಅಧ್ಯಕ್ಷರು ಮಾಧ್ಯಮಗಳ ವಿರುದ್ದ ಯಾವುದೇ ಮಾನಹಾನಿಕರ ವರದಿ ಮಾಡಬಾರದೆಂಬ ವಿಚಾರವಾಗಿ ತಡೆಯಾಜ್ಞೆ ತಂದಿರುವ ಹಿಂದಿನ ಉದ್ದೇಶವೇನು ಎಂದು ಕೆಪಿಸಿಸಿ ವಕ್ತಾರರಾದ ವಿನಯರಾಜ್ ಪ್ರಶ್ನಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪತ್ರಿಕಾರಂಗ ಸಂವಿಧಾನದ 4ನೇ ಅಂಗ ಎಂದು ಪರಿಗಣಿಸಲಾಗಿದೆ. ಜನರ ಕರಕ್ಷಣೆ ಮಾಡುವ ಜವಾಬ್ದಾರಿ ಭಕ್ತಿಕಾರಂಗದ ಕರ್ತವ್ಯವಾಗಿದೆ. ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವ ಸಂಗತಿಗಳ ವಿರುದ್ಧ ಹಾಗೂ ಸರಕಾರದ ಜನವಿರೋಧ ನೀತಿಗಳ ಏರುದ್ಧ ಧ್ವನಿ ಎತ್ತಿ ಜಾಗೃತಿ ಮೂಡಿಸುವ ಜವಾಬ್ದಾರಿಯುತ ಕೆಲಸ ಪತ್ರಿಕಾರಂಗ ಮಾಡುತ್ತಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು, ಉತ್ತಮ ಗುಣನಡತೆ ಹೊಂದಿದವರಾಗಿರಬೇಕು ಮತ್ತು ಮಾಡಿದರೆ ಅವರನ್ನು ತಿದ್ದುವುದು, ಸಮಾಜಕ್ಕೆ ಅವರು ತಪ್ಪು ಮಾಡಿದ ಬಗ್ಗೆ ತಿಳಿಸುವ ಕೆಲಸ ಪತ್ರಿಕಾ ರಂಗ ಮಾಡುವುದು ಸಹಜ. ಉತ್ತಮ ಕಾರ್ಯ ಮಾಡಿದರೆ ಅವರನ್ನು ಪ್ರೋತ್ಸಾಹಿಸುವ ಕೆಲಸ ಕೂಡ ಪತ್ರಿಕಾರಂಗ ಮಾಡುತ್ತದೆ.

ಪುತ್ತೂರು ಬಿಜೆಪಿ ಶಾಸಕರಾದ ಸಂಜೀವ ಮಟ್ಟಂದೂರು ರವರ ರಾಸಲೀಲೆ ಮಾಧ್ಯಮಗಳಲ್ಲಿ ವರದಿಯಾದ ತಕ್ಷಣ ಮೂಡಬಿದ್ರೆ ಶಾಸಕರಾದ ಶಾಸಕರಾದ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ರವರು ಸುಮಾರು 59 ಮಾಧ್ಯಮಗಳ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದನ್ನು ಗಮನಿಸಿದರೆ ಅವರು ಯಾವುದೇ ಘನಕಾರ್ಯ ಮಾಡಿಲ್ಲ ಎಂಬುವುದು ತಿಳಿಯುತ್ತದೆ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್, ರವರು ಸುಮಾರು 67 ಪತ್ರಿಕಾ/ಟಿಬಿ/ಯೂಟ್ಯೂಬ್/ವೆಬ್ ಪೋರ್ಟಲ್ಸ್ ವಿರುದ್ಧ ಮಂಗಳೂಲಿನ ಸಿವಿಲ್ ನ್ಯಾಯಾಲಯದಿಂದ ಯಾವುದೇ ಮಾನಹಾರಿಕರ ಸಮಾಚಾರ ವರದಿ ಮಾಡಬಾರದೆಂದು ತಡೆಯಾಜ್ಞೆ ತಂದಿರುತ್ತಾರೆ.

ಶಾಸಕರ ಮಾನಹಾನಿಯಾಗುವಂತಹ ಘನಕಾರ್ಯ ಅವರು ಏನು ಮಾಡಿದ್ದಾರೆ ಎಂಬುವುದನ್ನು ಮಂಗಳೂರಿನ ಮತದಾರರಿಗೆ ಅವರು ತಿಳಿಸಬೇಕಾಗುತ್ತದೆ. ಒಂದು ವೇಳೆ ಯಾವುದೇ ತಪ್ಪು ಮಾಡದಿದ್ದರೆ ಯಾತಕ್ಕಾಗಿ ತಡೆಯಾಜ್ಞೆ ತರಬೇಕು? ಕದ್ದು ಮುಚ್ಚಿ ಮಾಡಿದ ತಪ್ಪಾದರೂ ಯಾವುದು? ತಪ್ಪು ಮಾಡದಿದ್ದರೆ ಭಯ ಯಾಕೆ? ಎಂದು ಪ್ರಶ್ನಿಸಿದ್ದಾರೆ

ಇತ್ತೀಚೆಗೆ ಒಂದು ಪತ್ರಿಕೆಯಲ್ಲಿ ಬಿಜೆಪಿಯ ನಾಲ್ಕು ಶಾಸಕರುಗಳ ಫೋಟೊ ಹಾಕಿ ಅವರ ಚಾರಿತ್ರ್ಯದ ಬಗ್ಗೆ ಪ್ರಶ್ನಾರ್ತಕ ಚಿಹ್ನೆ ಹಾಕಿ ವರದಿಯಾಗಿತ್ತು. ನಾಲ್ಕರಲ್ಲಿ ಮೂವರು ಶಾಸಕರು ಯಾವುದೇ ತಡೆಯಾಜ್ಞೆ ತಂದಿಲ್ಲ. ತಡೆಯಾಜ್ಞೆ ತಂದಿರುವಂತದ್ದು ವೇದವ್ಯಾಸ ಕಾಮತ್ ರವರು. ಇದಕ್ಕೆ ಈ ತಡೆಯಾಜ್ಞೆ ಪುಷ್ಟಿ ನೀಡುತ್ತದೆ. ಪತ್ರಿಕೆ/ಟಿವಿ ಮಾಧ್ಯಮದ ಮೇಲೆ ಇವರಿಗೆ ವಿಶ್ವಾಸ ಇಲ್ಲ ಎಂದು ಸಾಬೀತಾಗುತ್ತದೆ ಎಂದು ಹೇಳಿದರು.


Spread the love