
ಬಿಜೆಪಿ ಸರಕಾರ ಟೋಲ್ ದರೋಡೆಯ ಮೂಲಕ ಜನಸಾಮಾನ್ಯರ ಬದುಕಿಗೆ ಬರೆ ಎಳೆಯುತ್ತಿದೆ – ರಮೀಝ್ ಹುಸೇನ್
ಕಾಪು: ಸದಾ ಭ್ರಷ್ಟಾಚಾರದಿಂದ ಮುಳುಗಿರುವ ಬಿಜೆಪಿ ಸರಕಾರ ಈ ಟೋಲ್ ದರೋಡೆಯ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ ಎಂದು ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುರತ್ಕಲ್ ಟೋಲ್ ಅನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಸಮಾನ ಮನಸ್ಕರನ್ನು ಸೇರಿಸಿ ಟೋಲ್ ಹೋರಾಟ ಸಮಿತಿ ಅನಿರ್ದಿಷ್ಠಾವಧಿ ಹಗಲು ರಾತ್ರಿ ಧರಣಿಯನ್ನು ಹಮ್ಮಿಕೊಂಡಿರುವ ಪರಿಣಾಮ ಸುರತ್ಕಲ್ ಟೋಲ್ ಅನ್ನು ರದ್ದು ಮಾಡುತ್ತೇವೆ ಅನ್ನುತ್ತಿದ್ದ ಜನಪ್ರತಿನಿಧಿಗಳು , ಇಂದು ವಿಲೀನದ ನೆಪ ಹೇಳಿ ಸುರತ್ಕಲ್ ಟೋಲ್ ದರವನ್ನು ಹೆಜಮಾಡಿ ಟೋಲ್ ನಲ್ಲಿ ಪೂರ್ತಿಯಾಗಿ ಸೇರಿಸಿ ಹಣ ಸಂಗ್ರಹಿಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಈ ದುಪ್ಟಟು ದರವನ್ನು ಜನ ಸಾಮಾನ್ಯರು ಕಟ್ಟುವಂತಹ ಪರಿಸ್ಥಿತಿ ಒದಗಿ ಬಂದಿದೆ. ದಿನದಿಂದ ದಿನಕ್ಕೆ ಗಗನಕ್ಕೆ ಏರುತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಒಂದಡೆಯಾದರೆ ,ಈಗ ಟೋಲ್ ಮೂಲಕ ಜನರ ಸುಲಿಗೆ ನಡೆಸಿ ಜನ ಸಾಮಾನ್ಯ ನ ಬದುಕಿಗೆ ಕೂಳ್ಳಿ ದೀಪ ಇಡಲು ಸರಕಾರ ತಯಾರಿ ನಡೆಸುತಿದೆ ಇದೇ ರೀತಿ ಮುಂದುವರಿದಲ್ಲಿ ಅರ್ಥಿಕವಾಗಿ ಕುಗ್ಗಿರುವ ಜನರ ಬದುಕು ಕಂಗಲಾಗುವ ಪರಿಸ್ಥಿತಿಗೆ ಬರುವಂತೆ ಈ ಸರಕಾರ ಮಾಡುತಿದೆ.
ಈಗಾಗಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಷಿಕೃತ ದರದಲ್ಲಿ ಡಿಸೆಂಬರ್ 1 ರಿಂದ ಹೆಜಮಾಡಿ ಟೋಲ್ ನಲ್ಲಿ ದುಪ್ಪಟ್ಟು ಟೋಲ್ ವಸೂಲಿ ನಡೆಯಲಿದೆ.. ಇದರಿಂದ ಹೆಜಮಾಡಿ, ಪಡುಬಿದ್ರಿ ಆಸುಪಾಸಿನ ಜನರು ಕೇವಲ 6 ಕಿ.ಮಿ ದೂರದ ಮುಲ್ಕಿ ಗೆ ಕಾರಿನಲ್ಲಿ ಹೋಗಿ ಬರಬೇಕಾದರೆ ಹೆಜಮಾಡಿ ಟೋಲ್ ನಲ್ಲಿ 155 ರೂಪಾಯಿಯನ್ನು ಕಟ್ಟಬೇಕಾಗಿದೆ ಇಂತಹ ಹಗಲು ದರೋಡೆಯನ್ನು ಯಾವುದೇ ಕಾರಣಕ್ಕೂ ಒಪ್ಪುವಂತದ್ದಲ್ಲ ಇದು ಡಬಲ್ ಇಂಜಿನ್ ಸರಕಾರದ ಡಬಲ್ ಲೂಟಿ, ಇಷ್ಟಾದರೂ ಇನ್ನೂ ಬಾಯಿ ಮುಚ್ಚಿ ಕುಳಿತಿರುವ ಸರಕಾರ ನಡೆಸುತಿರುವ ಸ್ಥಳೀಯ ಶಾಸಕರು , ಸಂಸದರು ಧ್ವನಿ ಎತ್ತದಿರುವುದು ವಿಪರ್ಯಾಸವೇ ಸರಿ ,ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ದುಪ್ಪಟ್ಟು ದರವನ್ನು ರದ್ದು ಗೊಳಿಸದ್ದಿದಲ್ಲಿ ಯುವ ಕಾಂಗ್ರೆಸ್ ಜನ ವಿರೋಧಿ ನಿರ್ಧಾರದ ವಿರುದ್ಧ ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆಗೆ ನಡೆಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.