ಬಿಜೆಪಿ ಸರಕಾರ ಭ್ರಷ್ಟತೆಯ ಮುಕುಟ – ಅನಿತಾ ಡಿಸೋಜ ಬೆಳ್ಮಣ್

Spread the love

ಬಿಜೆಪಿ ಸರಕಾರ ಭ್ರಷ್ಟತೆಯ ಮುಕುಟ – ಅನಿತಾ ಡಿಸೋಜ ಬೆಳ್ಮಣ್

ಕಾರ್ಕಳ: ಸುರತ್ಕಲ್ ಟೋಲ್ ಬಗೆಗಿನ ನಾಟಕ ದಿನೇದಿನೆ ರಂಗೇರುತ್ತಿದೆ ಮತ್ತು ಅದರ ರಂಗು ಬಿಜೆಪಿ ಮತ್ತು ಅದರ ನಾಯಕರ ಮುಖದಲ್ಲಿ ಕಾಣುತ್ತಿದೆ. ಬಿಜೆಪಿ ನಾಯಕರು ದಿನಕ್ಕೊಂದು ಹೇಳಿಕೆ ನೀಡುತ್ತಾ ಇವತ್ತು/ ನಾಳೆ ಟೋಲ್ ತೆರವು ಗೊಳಿಸಲಾಗುವುದು ಎಂದು ಹೇಳುತ್ತಾ ಜನರನ್ನು ಯಾಮರಿಸುವ ಪರಿ ನೋಡಿದರೆ ಇವರು ಯಾವುದೇ ನಾಟಕ ಕಂಪನಿಗೆ ಕಡಿಮೆ ಇಲ್ಲಾ ಎಂದು ಸಾಬೀತು ಪಡಿಸಿದ್ದಾರೆ ಈ ಸಲದ ಓಸ್ಕರ್ ಅವಾರ್ಡ್ ಇವರಿಗೇ ನೀಡಬೇಕು ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿ’ಸೋಜಾ ಬೆಳ್ಮಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ ಭಾವನೆ ಹಾಗೂ ಜೀವನದ ಜೊತೆ ಚೆಲ್ಲಾಟ ಆಡುವುದು ಇವರಿಗೆ ನಿತ್ಯನೂತನ ಹಾಗೂ ಅಮೋಘ ಖುಷಿ ನೀಡುತ್ತೆ ಅನಿಸುತ್ತದೆ. ಒಂದು ರಾಷ್ಟ್ರೀಯ ಪಕ್ಷ ಮತ್ತು ಅದರ ನಾಯಕರ ಈ ವರ್ತನೆ ಹೇಸಿಗೆ ತರಿಸುವಂತಿದೆ.

ಮಂಗಳೂರು ಮತ್ತು ಉಡುಪಿಯ ನಾಗರಿಕರನ್ನು ಜಾತಿ, ಧರ್ಮ, ಮತ್ತು ಕೇಸರಿ, ಹಿಜಾಬ್ ಹಾಗೂ ಹಿಂದೂ ಪದದ ಹೆಸರಲ್ಲಿ ಒಡೆದು ಓಟು ಪಡೆಯಬಹುದು ಮತ್ತು ಗೆಲುವು ತಮ್ಮದೇ ಎನ್ನುವ ಭಂಡ ಧೈರ್ಯ ಇವರಲ್ಲಿ ಅಗಾಧ ಪ್ರಮಾಣದಲ್ಲಿರುವುದು ಗೋಚರಿಸುತ್ತಿದೆ.

ಇಲ್ಲವೆಂದಾದರೆ ಸುರತ್ಕಲ್ ಟೋಲ್ ತೆರವು ಗೊಳಿಸುವ ಭರವಸೆ ನೀಡಿ ಅದನ್ನು ಹೆಜಮಾಡಿ ಟೋಲ್ನಲ್ಲಿ ವಿಲೀನ ಮಾಡಿ ಹಗಲು ದರೋಡೆಯನ್ನು ಮುಂದುವರಿಸಲು ಇವರಿಗೆ ಧೈರ್ಯ ಬರುತ್ತಿರಲಿಲ್ಲ. ಇವರ ಮೊಂಡುತನಕ್ಕೆ ತುಳು ಸಮಾಜದ ನಾಗರೀಕ ಬಂಧುಗಳು ಮುಂದೆ ಓಟಿನ ಸಮಯದಲ್ಲಿ ಇವರಿಗೆ ತಕ್ಕ ಪಾಠ ಕಲಿಸುವುದು ಖಂಡಿತ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here