ಬಿಜೆಪಿ ಸರ್ಕಾರದಿಂದ ಕಮಿಷನ್ ಪರ್ಸೆಂಟೇಜ್ ಹೆಚ್ಚಳ:ಹೆಚ್ಡಿಕೆ

Spread the love

ಬಿಜೆಪಿ ಸರ್ಕಾರದಿಂದ ಕಮಿಷನ್ ಪರ್ಸೆಂಟೇಜ್ ಹೆಚ್ಚಳ:ಹೆಚ್ಡಿಕೆ

ಮೈಸೂರು: ಪರ್ಸೆಂಟೆಜ್ ಎಲ್ಲ ಕಾಲದಲ್ಲಿದ್ದರೂ 2008ರಲ್ಲಿ ಬಿಜೆಪಿ ಸರ್ಕಾರ ರಚನೆ ಆದ ಮೇಲೆ ಪರ್ಸೆಂಟೆಜ್ ಹೆಚ್ಚಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ- ರಾಜ್ಯ ಸರ್ಕಾರದವರೆಗೂ ಸಣ್ಣ ಮಟ್ಟದಲ್ಲಿ ಎಲ್ಲಾ ಕಾಲದಲ್ಲೂ ಇತ್ತು. ಅಬಕಾರಿ ಲಾಬಿ, ಶಿಕ್ಷಣ ಲಾಬಿ, ಗುತ್ತಿಗೆದಾರರೂ ಮೊದಲಿಂದಲ್ಲೂ ಶೇ. 2.3 ಪರ್ಸೆಂಟೆಜ್ ಮೊದಲಿಂದಲ್ಲೂ ಫಿಕ್ಸ್ ಆಗಿದೆ. ಕಮಿಷನ್ ಹೆಚ್ಚಾಗಿದ್ದೇ ಬಿಜೆಪಿಯಿಂದ ಗುತ್ತಿಗೆದಾರರಿಗೆ ಕಿರುಕುಳ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ ಗುತ್ತಿಗೆದಾರರು 6 ತಿಂಗಳು ಸರ್ಕಾರಿ ಟೆಂಡರ್‌ನಲ್ಲಿ ಭಾಗವಹಿಸಲ್ಲ ಅಂತಾ ಬಾಯ್ಕಟ್ ಮಾಡಲಿ ಎಂದು ಸಲಹೆ ನೀಡಿದರು.

ನಾನು ಸಿಎಂ ಆಗಿದ್ದಾಗ ಪರ್ಸೆಂಟೆಜ್ ಕೇಳಿಲ್ಲ. ಎರಡು ಅವಧಿಯಲ್ಲೂ ಆದ ಬಿಜೆಪಿ ಸರ್ಕಾರ ಬಂದ ಮೇಲೆ ಶಾಸಕರ ಮಟ್ಟದಲ್ಲೇ ಪರ್ಸೆಂಟೆಜ್ ಶುರುವಾಯ್ತು. ಶಾಸಕರೇ ಬೆಟ್ಟ ಗುಡ್ಡ ಲೀಸ್ ಹಾಕಿಸಿಕೊಂಡು ಕ್ರಷರ್ ಶುರು ಮಾಡಿದ್ದಾರೆ. ಇದೆಲ್ಲ ಶುರುವಾಗಿದ್ದು ಬಿಜೆಪಿ ಸರ್ಕಾರದಲ್ಲಿ ಎಂದು ಅವರು ಆರೋಪಿಸಿದರು.

ನನ್ನ ಆಡಳಿತ ಕಾಲದಲ್ಲೂ ಕೆಲವೊಂದು ಇಲಾಖೆಯಲ್ಲೇ ಪರ್ಸೆಂಟೆಜ್ ಪಡೆದಿದ್ದಾರೆ. ಅದು ನನಗೆ ಗೊತ್ತು. ನನ್ನ ಪಕ್ಷದ ಕೈಯಲ್ಲಿದ್ದ ಇಲಾಖೆಗಳಲ್ಲಿ ಅದು ಆಗಲಿಲ್ಲ. ನಾನು ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಕಾಂಗ್ರೆಸ್ ನಾಯಕರು ಇದು ನನ್ನ ಇಲಾಖೆ, ನನ್ನ ಮೇಲೆ ಹಿಡಿತ ಮಾಡಬಾರದು ಎಂದು ಪದೇ ಪದೇ ಹೇಳ್ತಿದ್ದರು. ಹೀಗಾಗಿ, ಕಾಂಗ್ರೆಸ್ ನಾಯಕರಿಗೆ ಪರ್ಸೆಂಟೆಜ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಲಾಟರಿ ನಿಷೇಧ ಮಾಡುವಾಗ ನನ್ನ ಮೇಲೆ ಒತ್ತಡ ತಂದರು. ಆಫರ್ ಮೇಲೆ ಆಫರ್ ಇಟ್ಟಿದ್ದರು. ಆಫರ್ ಕೊಟ್ಟವರು ಇನ್ನೂ ಬದುಕಿದ್ದಾರೆ. ಹೈಕಮಾಂಡ್‌ಗೆ ಹಣ ಕಳಿಸುವ ಪ್ರಕ್ರಿಯೆ ಎರಡು ಪPದಲ್ಲಿದೆ. ನಾವು ಆಡಳಿತದಲ್ಲಿದ್ದಾಗ ಯಾವ ಅಧಿಕಾರಿಗಳ ಬಳಿಯೂ ಹಣ ಕೇಳಿಲ್ಲ. ಚಂದ ಎತ್ತಿಸಿಲ್ಲ. ಹೀಗಾಗಿ, ಸರ್ಕಾರದ ಕಡತಗಳು ನಮಗೆ ಬೇಗ ಸಿಗುತ್ತವೆ ಎಂದರು.

ಯಾರು ಇಲ್ಲಿ ನೆಟ್ಟಗಿದ್ದಾರೆ ಹೇಳಿ? ಬೆಂಗಳೂರಿನಲ್ಲಿ ಮೂರು ಜನ ಪP ಬಿಟ್ಟು ಹೋದರಲ್ಲ, ಆ ಮೂರು ಜನ ಬಿಡಿಎ ಸಭೆಗೆ ಬಂದರೆ ಇಷ್ಟು ಹಣ ಕೊಡಬೇಕಿತ್ತು. ಅದು ನೀವು ಬಂದ ಮೇಲೆ ನಿಲ್ತು ಅಂತಾ ಅಧಿಕಾರಿ ಹೇಳಿದರು. ಆ ಮೂವರು ಈಗ ಸಂಪತ್ ಭರಿತರಾಗಿ ಲೂಟಿ ಮಾಡ್ತಿದ್ದಾರೆ ಎಂದು ಅವರು ದೂರಿದರು.


Spread the love