ಬಿಜೆಪಿ ಸರ್ಕಾರ ಚೆಲ್ಲಾಟವಾಡುತ್ತಿದೆ: ಆರ್.ಧ್ರುವನಾರಾಯಣ್

Spread the love

ಬಿಜೆಪಿ ಸರ್ಕಾರ ಚೆಲ್ಲಾಟವಾಡುತ್ತಿದೆ: ಆರ್.ಧ್ರುವನಾರಾಯಣ್

ಸರಗೂರು: ಬಿಜೆಪಿ ಸರ್ಕಾರ ದೇಶದ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದು,  ಹಿಂದೆ ಸಂಕಷ್ಟದಿಂದ ಮುಕ್ತಿ ಹೊಂದಿದ ಜನತೆ ಕಷ್ಟದಲ್ಲಿರುವಾಗ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಆರೋಪ ಮಾಡಿದರು.

ತಾಲೂಕಿನ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಂತೆಮಾಳದ ಸಂತೆ ಮಾಸ್ತಮ್ಮ  ದೇವಸ್ಥಾನದ ಹತ್ತಿರ ಆಯೋಜಿಸಿದ್ದ ಸ್ವಾತಂತ್ರ್ಯನಡಿಗೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ ಸಿದ್ದರಾಮಯ್ಯರವರು  ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾಲೂಕಿಗೆ ಹೆಚ್ಚಿನ ಅನುದಾನ ನೀಡಿದೆ. ಹಾಗೂ ಸರಗೂರನ್ನು ತಾಲೂಕಾಗಿ ಮಾಡಿದ್ದರೂ ಸಹ ಇವರ ಸರ್ಕಾರದಲ್ಲಿ ತಾರತಮ್ಯ ಅಂದರೆ ಕಾಂಗ್ರೆಸ್ ಶಾಸಕ ಇರುವುದರಿಂದ ಬಿಜೆಪಿಯವರು ಹೆಚ್ಚಿನ ಅನುದಾನ ನೀಡುತ್ತಿಲ್ಲ. ಅದೇ ಇವರ ಪಕ್ಷದ ಶಾಸಕರಾದರೆ ಹೆಚ್ಚಿನ ಅನುದಾನ ನೀಡುತ್ತಾರೆ, ಬಿಜೆಪಿ ಸರ್ಕಾರ ಬಂದಿದ್ದು ಮೂರು ಕಛೇರಿ ಬಿಟ್ಟರೆ ಇನ್ಯಾವುದೇ ಇಲಾಖಾ  ಕಛೇರಿಗಳು ಬಂದಿರುವುದಿಲ್ಲ, ಸರಗೂರು ಪಟ್ಟಣದಲ್ಲಿ ಬಿಜೆಪಿ ಸರ್ಕಾರದವರದೇ ಆಡಳಿತ ಇರುವಾಗ ಇವರು ಇನ್ನು ಏಕೆ ಮಾಡಿಲ್ಲ ಇದು ತಾರತಮ್ಯವಲ್ಲವೇ, ಹಿಂದೆ ನಮ್ಮ  ಮುಖ್ಯಮಂತ್ರಿಗಳು ಎಲ್ಲಾ ಭಾಗ್ಯವನ್ನು ಮಾಡಿದ್ದಾರೆ ಇವರು ಏನು ಮಾಡಿದ್ದಾರೆ ಹಾಗೂ ಬಿಜೆಪಿ ಸರ್ಕಾರ ಜೆಡಿಎಸ್ ಗೆ ಸಾಥ್ ನೀಡುತ್ತಿದೆ ಎಂದು ದೂರಿದರು.

ಇಂದಿರಾಗಾಂಧಿಯವರು ಉಳುವವನಿಗೆ ಭೂಮಿಯನ್ನು ಮಾಡಿಕೊಟ್ಟವರು. ಕಾಂಗ್ರೆಸ್ ಪಕ್ಷ 30 ವರ್ಷಗಳ ಹೋರಾಟದ ಫಲವಾಗಿ ಇಂದು ಸರಗೂರು ತಾಲ್ಲೂಕು ಕೇಂದ್ರ ಆಗಲು ಸಿದ್ದರಾಮಯ್ಯ ಕಾರಣ, ಈಗ ಇರುವ ಬಿಜೆಪಿ ಸರ್ಕಾರ ಈ ತಾಲ್ಲೂಕಿಗೆ ಯಾವುದೇ  ಅನುದಾನವನ್ನು ನೀಡದೆ ಮಲತಾಯಿ ಧೋರಣೆ ಮಾಡುತ್ತಿದೆ. ಈ ಸರ್ಕಾರದ ವೈಫಲ್ಯವನ್ನು ಎತ್ತಿ ಹಿಡಿಯ ಬೇಕು ಎಂದರು.

ಶಾಸಕರಾದ ಅನಿಲ್ ಚಿಕ್ಕಮಾದು,  ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ ತಿಮ್ಮಯ್ಯ, ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಬಿಜೆ ವಿಜಯಕುಮಾರ್, ಸರಗೂರು, ಕೋಟೆ ಬ್ಲಾಕ್ ಅಧ್ಯಕ್ಷರಾದ ಮನುಗನಹಳ್ಳಿ ಮಾದಪ್ಪ,ಕೋಟೆ ಏಜಾಜ್ ಪಾಶ, ಕ್ಷೇತ್ರದ ಉಸ್ತುವಾರಿ ಕಾವೇರಪ್ಪ,ಕಾಂಗ್ರೆಸ್ ಯೂತ್ ಅಧ್ಯಕ್ಷ ಶಿವರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ವಾಲ್ಮೀಕಿ ಸಹಕಾರ ಸಂಘದ ಅಧ್ಯಕ್ಷ  ಕೆ ಚಿಕ್ಕವೀರನಾಯಕ, ಎಸ್ಎಸ್ ಪ್ರಭುಸ್ವಾಮಿ, ಮುಖಂಡ ಪಿ ರವಿ, ಬಿಸಿ ಬಸಪ್ಪ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಮಂಜುನಾಥ್, ಸರಗೂರು ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀನಿವಾಸ್, ಚೆಲುವಕೃಷ್ಣ, ಹೆಚ್ ಸಿ ನರಸಿಂಹಮೂರ್ತಿ, ಸತೀಶ್ ಗೌಡ, ರಂಗನಾಥ, ಮಹೇಶ, ಶೇಷ, ಸೂಹೆಲ್, ಶುಬಾನ್, ಚಾಮರಾಜ್, ಭಾಗ್ಯ ಲಿಂಗರಾಜ್, ಮಾಜಿ ಸದಸ್ಯ ರಮೇಶ್, ಇನ್ನಿತರ ಪಕ್ಷದ ಮುಖಂಡರುಗಳು ಯುವ ಮುಖಂಡರು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


Spread the love