ಬಿಡದಿಯ ಹೆಜ್ಜಾಲದಲ್ಲಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ

Spread the love

ಬಿಡದಿಯ ಹೆಜ್ಜಾಲದಲ್ಲಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ

ರಾಮನಗರ: ಮಾಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಜಾದ್ವನಿ ಯಾತ್ರೆಗೆ ಬಿಡದಿಯ ಹೆಜ್ಜಾಲದಲ್ಲಿ ಸಂಸದ ಡಿ.ಕೆ.ಸುರೇಶ್ ಚಾಲನೆ ನೀಡಿದರು.

ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ನೇತೃತ್ವದಲ್ಲಿ ಬಿಡದಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರಜಾದ್ವನಿ ಯಾತ್ರೆ ನಿಮಿತ್ತ ಏರ್ಪಡಿಸಿದ್ದ ಬೈಕ್ ರಾಲಿಗೆ ಬಿಡದಿ ಹೋಬಳಿ ಹೆಜ್ಜಾಲ ಗ್ರಾಮದ ಬಳಿ ಸಂಸದ ಡಿ.ಕೆ.ಸುರೇಶ್ ಅವರು ಕಾಂಗ್ರೆಸ್ ಬಾವುಟ ಹಿಡಿದು ಹಸಿರು ನಿಶಾನೆ ತೋರಿಸಿ ಬೀಳ್ಕೊಟ್ಟರು. ಪ್ರಜಾದ್ವನಿ ಪ್ರಚಾರ ವಾಹನದ ಜೊತೆಗೆ ನೂರಾರು ಬೈಕ್ ಮತ್ತು ಕಾರುಗಳಲ್ಲಿ ತೆರಳಿದ ಕಾರ್ಯಕರ್ತರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಕಾಡುಮನೆ ಸರ್ಕಲ್, ಭೈರಮಂಗಲ ಕ್ರಾಸ್ ಮೂಲಕ ಬಿಡದಿ ಪಟ್ಟಣದ ಬಿಜಿಎಸ್ ಸರ್ಕಲ್‌ ನಲ್ಲಿ ಜಮಾಯಿಸಿದರು.

ಬಿಜಿಎಸ್ ವೃತ್ತದಲ್ಲಿರುವ ದಿ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುತ್ಥಳಿಗೆ ಸಂಸದ ಡಿ.ಕೆ.ಸುರೇಶ್, ವಿಧಾನಪರಿಷತ್ ಸದಸ್ಯರಾದ ಸಿ.ಎಂ.ಲಿಂಗಪ್ಪ, ಎಸ್.ರವಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಸೇರಿದಂತೆ ಮುಂತಾದ ಗಣ್ಯರು ಪೂಜೆ ಸಲ್ಲಿಸಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಪ್ರಚಾರ ವಾಹನ ಏರಿದ ಸಂಸದ ಡಿ.ಕೆ.ಸುರೇಶ್ ಮತ್ತು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಅಭಿಮಾನಿಗಳು ಕ್ರೇನ್ ಯಂತ್ರದ ಸಹಾಯದಿಂದ ಬೃಹತ್ ಗಾತ್ರದ ಸೇಬಿನ ಹಾರವನ್ನು ಹಾಕಿ ಸಂಭ್ರಮಿಸಿದರು. ನಂತರ ಪ್ರಜಾದ್ವನಿ ಯಾತ್ರೆಯು ರಾಮನಗರ ತಾಲ್ಲೂಕಿನ ಶ್ಯಾನುಭೋಗನಹಳ್ಳಿಗೆ ಪ್ರಯಾಣ ಬೆಳೆಸಿತು.

ಪ್ರಜಾದ್ವನಿ ಯಾತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಠ ವಿಭಾಗದ ಅಧ್ಯಕ್ಷ ನರಸಿಂಹಯ್ಯ, ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜು, ಬಿಡದಿ ಪುರಸಭೆ ಸದಸ್ಯರಾದ ಸಿ.ಉಮೇಶ್, ಎನ್.ಕುಮಾರ್, ಹೊಂಬಯ್ಯ, ಬಿಂಧು ಮಂಜುನಾಥ್, ನವೀನ್, ಮಹಿಮಾ ಕುಮಾರ್, ರಾಮಚಂದ್ರಯ್ಯ, ಶ್ರೀನಿವಾಸ್, ಮಂಚನಾಯ್ಕನಹಳ್ಳಿ ಗ್ರಾಪಂ ಅಧ್ಯಕ್ಷ ವಿ.ಸತೀಶ್‌ಕುಮಾರ್, ಮುಖಂಡರಾದ ಬೆಟ್ಟಸ್ವಾಮಿ, ಉಮಾಶಂಕರ್, ಹರೀಶ್ ಪಟೇಲ್, ಶಿವಣ್ಣ, ಯು.ನರಸಿಂಹಯ್ಯ, ಹೊಸೂರು ರಾಜಣ್ಣ, ಅಬ್ಬನಕುಪ್ಪೆ ರಮೇಶ್, ನಾಗೇಶ್, ಜೀವನ್‌ಬಾಬು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.


Spread the love

Leave a Reply

Please enter your comment!
Please enter your name here