ಬಿಪಿನ್ ರಾವತ್ ಬಗ್ಗೆ ಅವಹೇಳನಕಾರಿ ಬರಹ: ಮಂಗಳೂರಿನಲ್ಲಿ ಪ್ರಕರಣ ದಾಖಲು

Spread the love

ಜ.ಬಿಪಿನ್ ರಾವತ್ ಬಗ್ಗೆ ಅವಹೇಳನಕಾರಿ ಬರಹ: ಮಂಗಳೂರಿನಲ್ಲಿ ಪ್ರಕರಣ ದಾಖಲು

ಮಂಗಳೂರು : ಫೇಸ್ ಬುಕ್ ನಲ್ಲಿ ಹೆಲಿಕಾಪ್ಟಾರ್ ದುರಂತದಲ್ಲಿ ಮಡಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಬಗ್ಗೆ ಅವಹೇಳನ, ಪ್ರಚೊದನಾಕಾರಿ ಬರಹ ಪ್ರಕಟಿಸಿದ ಮೂವರ ವಿರುದ್ದ ಮಂಗಳೂರಿನಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.‌ಆರೋಪಿಗಳ ಪತ್ತೆ ಹಚ್ಚಲಾಗುವುದು, ಇವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಫೇಸ್‌ಬುಕ್ ಪುಟದಲ್ಲಿ ಮೂವರು ವ್ಯಕ್ತಿಗಳು ದ್ವೇಷದ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ಜನರಲ್ ಬಿಪಿನ್ ರಾವತ್ ಅವರ ಮೇಲೆ ದ್ವೇಷದ ಸಂದೇಶಗಳನ್ನು ಪೋಸ್ಟ್ ಮಾಡಿದವರ ವಿರುದ್ಧ ನಾವು ಪ್ರಕರಣಗಳನ್ನು ದಾಖಲಿಸಿದ್ದೇವೆ ಆ ಖಾತೆಗಳನ್ನು ಅಸಲಿಯೋ ನಕಲಿಯೋ ಎಂದು ಹುಡುಕುವ ಪ್ರಕ್ರಿಯೆಯಲ್ಲಿದ್ದೇವೆ. ಫೇಸ್‌ಬುಕ್ ಖಾತೆದಾರರಲ್ಲಿ ಒಬ್ಬರು ಕಾರ್ಕಳದವರು, ಇನ್ನೊಬ್ಬರು ಬೆಂಗಳೂರಿನವರು ಮತ್ತು ಇನ್ನೊಬ್ಬರು ಅಪರಿಚಿತರಾಗಿದ್ದು ಈ ಕಾರಣ ನಾವು ತಜ್ಞರ ಸಲಹೆಯನ್ನು ತೆಗೆದುಕೊಳ್ಳುತ್ತೇವೆ. ತನಿಖೆಗಾಗಿ ಅವರನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ. ಈ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಎಂದರು

ಮಿಳುನಾಡಿನ ಕುನೂರ್ ಬಳಿ ಬುಧವಾರ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿಜನರಲ್ ಬಿಪಿನ್ ರಾವತ್, ಪತ್ನಿ ಮತ್ತು ಇತರ 11 ಮಂದಿ ಸಾವನ್ನಪ್ಪಿದ್ದನ್ನು ವಿಚಾರವನ್ನು ಕೆಲವರು ಅಪಹಾಸ್ಯ ಮಾಡಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶ ಉಂಟಾಗಿತ್ತು.


Spread the love