ಬಿಳಿಗಿರಿರಂಗನ‌ಬೆಟ್ಟದಲ್ಲಿ ಮುಗಿಯದ ಕಾಮಗಾರಿ

Spread the love

ಬಿಳಿಗಿರಿರಂಗನ‌ಬೆಟ್ಟದಲ್ಲಿ ಮುಗಿಯದ ಕಾಮಗಾರಿ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ದ ಯಾತ್ರಾಸ್ಥಳದಲ್ಲಿ ಒಂದಾಗಿರುವ ಬಿಳಿಗಿರಿರಂಗನ‌ಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ ದೇಗುಲದ ನೆಲಹಾಸು ಕಾಮಗಾರಿ ಆರಂಭವಾಗಿ ಒಂದೂ ಮುಕ್ಕಾಲು ವರ್ಷವಾದರೂ ಮುಗಿಯದ ಕಾರಣ ದೇವಾಲಯಕ್ಕೆ ಬರುವ ಭಕ್ತರು ಸಂಕಷ್ಟ ಪಡುವಂತಾಗಿದೆ.

ಬಿಳಿಗಿರಿರಂಗನ ಬೆಟ್ಟದಲ್ಲಿ ಮುಜರಾಯಿ ಇಲಾಖೆಯ ಅನುದಾನದಲ್ಲಿ ದೇವಾಲಯ ಜೀರ್ಣೋದ್ಧಾರ ನಡೆಯುತ್ತಿದೆ.‌ನೆಲಹಾಸು ಕಾಮಗಾರಿ ಕಳೆದ ಒಂದೂ ಮುಕ್ಕಾಲು ವರ್ಷ ಕಳೆದರೂ ಆಮೆ ವೇಗದಲ್ಲಿ ಸಾಗುತ್ತಿದೆ. ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು, ಇದೀಗ ನೆಲಹಾಸು ಸಂಪೂರ್ಣಗೊಳ್ಳದ ಕಾರಣ ತೊಂದರೆ ಅನುಭವಿಸುವಂತಾಗಿದೆ.

ಈಗ ಮಳೆ ಸುರಿಯುತ್ತಿರುವ ಕಾರಣ ಮಳೆ ನೀರು ದೇಗುಲದ ಆವರಣದಲ್ಲಿ ಸಂಗ್ರಹವಾಗುತ್ತಿದೆ. ಇದರಿಂದ ದೇವಾಲಯಕ್ಕೆ ತೆರಳುವುದಕ್ಕೆ ಹಾಗೂ ಪ್ರದಕ್ಷಿಣೆ ಹಾಕುವುದಕ್ಕೆ ತೊಂದರೆಯಾಗುತ್ತಿದೆ, ಬಿಳಿಗಿರಿರಂಗನ ಬೆಟ್ಟದಲ್ಲಿ ಇಷ್ಟೊಂದು ಸಮಸ್ಯೆ ಇದ್ದರೂ ಜಿಲ್ಲಾಡಳಿತ ಮೌನವಹಿಸಿದ್ದೇಕೆ?. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಬಿಳಿಗಿರಿರಂಗನ ಬೆಟ್ಟದಲ್ಲಿ ತ್ವರಿತ ಕಾಮಗಾರಿ ಮುಂದುವರೆಸಬೇಕೆಂಬುದು ಭಕ್ತರ ಮನವಿಯಾಗಿದೆ.


Spread the love