
Spread the love
ಬಿಸಿಲ ಧಗೆಯಿಂದ ಬಸವಳಿದಿದ್ದ ಉಡುಪಿ ಜನತೆಗೆ ತಂಪೆರೆದ ಮಳೆ
ಉಡುಪಿ: ಜಿಲ್ಲೆಯ ವಿವಿಧೆಡೆ ಮಂಗಳವಾರ ಬೆಳಿಗ್ಗೆ ಸಾಧಾರಣ ಮಳೆಯಾಗಿದ್ದು ಕಳೆದ ಹಲವು ದಿನಗಳಿಂದ ಬಿಸಿಲ ಝಳಕ್ಕೆ ತತ್ತರಿಸಿದ್ದ ಉಡುಪಿ ಜಿಲ್ಲೆಯ ಜನತೆಗೆ ಕೊಂಚ ತಂಪು ನೀಡಿದೆ.
ಮಂಗಳವಾರ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿದು ಬಿಸಿಲಿನಿಂದ ಬಳಲುತ್ತಿದ್ದ ಜನರಿಗೆ ನೆಮ್ಮದಿ ಉಂಟು ಮಾಡಿತು. ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ.
ಬೆಳಗ್ಗೆ ಉಡುಪಿಯಿಂದ ವಿವಿಧ ಕಡೆಗೆ ಉದ್ಯೋಗ ಹಾಗೂ ಇನ್ನಿತರ ಉದ್ದೇಶಕ್ಕೆ ಹೊರಟವರಿಗೆ ಕೊಂಚ ಸಮಸ್ಯೆಯಾಗಿತ್ತು.
Spread the love