ಬಿಸ್ಮಿ ರಿಯಾದ್ ಇದರ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಮಿತಿ ರಚನೆ

Spread the love

ಬಿಸ್ಮಿ ರಿಯಾದ್ ಇದರ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಮಿತಿ ರಚನೆ

ರಿಯಾದ್ : ಬಿಸ್ಮಿ ರಿಯಾದ್ ಇದರ ವಾರ್ಷಿಕ ಮಹಾ ಸಭೆಯು ನವೆಂಬರ್ 27, 2020 ರ ಶುಕ್ರವಾರ ಮಧ್ಯಾಹ್ನ ರಿಯಾದಿನ ನೋವ ಆಡಿಟೋರಿಯಂ ನಲ್ಲಿ ನಡೆಯಿತು. ಮೊಹಮ್ಮದ್ ರಾಯೀಸ್ ಕಿರಾತ್ ಓದುವ ಮೂಲಕ ಸಭೆಯು ಪ್ರಾರಂಭಗೊಂಡಿತು. ಸಭೆಯಲ್ಲಿ ಇದ್ದಂತಹ ಅಥಿತಿಗಳನ್ನು ಮತ್ತು ಸದಸ್ಯರನ್ನು ಉದ್ದೇಶಿಸಿ ಸ್ವಾಗತ ಬಾಷಣ ಮಾಡಿದರೆ, ನಿಸಾರ್ ಅಹ್ಮದ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.

ಕಳೆದ ವರ್ಷ ನಡೆದ ಕಾರ್ಯಚಟುವಟಿಕೆ ಮತ್ತು ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಇರ್ಷಾದ್ ಮೊಯಿದಿನ್ ವಾಚಿಸಿದರು.

ಸಭೆಯಲ್ಲಿ ಮುಖ್ಯ ಅಥಿತಿಯಾಗಿ ಬಾಗವಹಿಸಿದಂತಹ ಸ್ಯೆದ್ ಬಾವ ಬಂಕಲ್ (ಭಾಮಾ ದಮ್ಮಾಮ್ ಅಧ್ಯಕ್ಷರು ಮತ್ತು ಬಿಸ್ಮಿ ರಿಯಾದ್ ಸ್ಥಾಪಕ ಸದಸ್ಯರು),, ನೌಶಾದ್ (ಭಾಮಾ ಉಪಾಧ್ಯಕ್ಷರು), ಷರೀಫ್, ಶೇಕ್ ಕರಂಬರ್ ಮತ್ತು ಜಲೀಲ್ ಕೊಂಚರ್ ರವರು ಹೊಸ ಸಮಿತಿಯನ್ನು ರಚಿಸಿದರು.

ಬಿಸ್ಮಿ ರಿಯಾದಿನ ನೂತನ ಸಮಿತಿಯನ್ನು ರಚಿಸಲಾಯಿತು.
ಬಿಸ್ಮಿ ರಿಯಾದಿನ ನೂತನ ಅಧ್ಯಕ್ಷರಾಗಿ ಇರ್ಷಾದ್ ಮೊಯಿದಿನ್, ಉಪಾಧ್ಯಕ್ಷರುಗಳಾಗಿ ಹರ್ಷದ್ ಅಯೂಬ್ ಮತ್ತು ಖಾಲಿದ್ ಕಂಚಿ, ಪ್ರಧಾನ ಕಾರ್ಯದರ್ಶಿಯಾಗಿ ಸಾಬಿತ್ ಹಸ್ಸನ್, ಜೊತೆ ಕಾರ್ಯದರ್ಶಿಯಾಗಿ ಶಫೀಕ್ ಷರೀಫ್, ಕೋಶಾಧಿಕಾರಿಯಾಗಿ ರಾಝಿಕ್, ಇವೆಂಟ್ ಒರ್ಗನೈಸರ್ ಆಗಿ ಅನ್ಸಾರ್ ಅಹ್ಮದ್, ಸಲಾವುದ್ದೀನ್ ಮತ್ತು ಸಮಿತಿ ಸಲಹೆಗಾರರಾಗಿ ಅಜೀಜ್ ಬಂಕಲ್ ಮತ್ತು ಶೇಕ್ ಕರಂಬಾರ್ ಆಯ್ಕೆ ಮಾಡಲಾಯಿತು. ಅದೇ ರೀತಿ ಕಾರ್ಯಕಾರಣೆ ಸಮಿತಿ ಸದಸ್ಯರಾಗಿ ಮೊಹಮ್ಮದ್ ಅಕ್ವಿಲ್, ಸಾಮಿತ್ ಅಬ್ದುಲ್ಲಾ, ತೋಸಿಫ್ ಮೊಯಿದಿನ್, ಇಮ್ರಾನ್ ಭಟ್ರಕೆರೆ, ನಿಜಾಮ್ ಸುಂಕದಕಟ್ಟೆ, ಸಲಾಂ, ಮೊಹಮ್ಮದ್ ಅಜೀಜ್ ಮತ್ತು ಯಾಸಿರ್ ಪ್ಯಾರ ಇವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಬಜ್ಪೆಯ ಸುತ್ತಮುತ್ತಲಿನ ಜನರು ಸಭೆಯಲ್ಲಿ ಭಾಗವಹಿಸಿದ್ದರು.

ಬಜ್ಪೆ ಸುತ್ತಮುತ್ತಲಿನ ಜಮಾತಿಗೊಳಪಟ್ಟ ಪ್ರದೇಶದ ಅಭಿವೃದ್ಧಿಗೆ ಹಲವಾರು ಯೋಜನೆಗೆಳ ಮಾಹಿತಿಯನ್ನು ಸಭೆಯಲ್ಲಿ ಚರ್ಚಿಸಿದರು. ನಂತರ ವಿವಿಧ ಕಾರ್ಯಕ್ರಮ ಮತ್ತು ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸಾಬಿತ್ ಹಸ್ಸನ್ ಕಾರ್ಯಕ್ರಮವಮ್ಮ ನಿರೂಪಿಸಿದರು.


Spread the love