ಬಿ.ಆರ್.ಹಿಲ್ಸ್ ನಲ್ಲಿ ಹುಲಿ ಸಾವಿಗೆ ಕಾರಣವೇನು?

Spread the love

ಬಿ.ಆರ್.ಹಿಲ್ಸ್ ನಲ್ಲಿ ಹುಲಿ ಸಾವಿಗೆ ಕಾರಣವೇನು?

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯದಲ್ಲಿ ಮಂಗಳವಾರ ಹುಲಿಯೊಂದರ ಕಳೇಬರ ಪತ್ತೆಯಾಗಿದೆ.

ಬೈಲೂರು ವಲಯದ ಬೆಳ್ಳಾಜೆ ಬೀಟ್ ವ್ಯಾಪ್ತಿಯ ಅತ್ತಿಕಾನೆ ಕಾಫಿ ಎಸ್ಟೇಟ್‌ನಲ್ಲಿ ಮೃತದೇಹ ಕಂಡು ಬಂದಿದ್ದು, ಹುಲಿಯ ದೇಹದ ಎಲ್ಲ ಅಂಗಗಳೂ ಇವೆ. ದೇಹದಲ್ಲಿ ಗಾಯದ ಗುರುತುಗಳಿಲ್ಲ ಎಂದು ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿ ದೀಪ ಜೆ. ಕಾಂಟ್ರ್ಯಾಕ್ಟರ್ ಹೇಳಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಹುಲಿಯ ಸಾವಿಗೆ ಸಂಬಂಧಿಸಿದಂತೆ ಮಾಹಿತಿಗಳು ತಿಳಿಯಲಿವೆ ಎಂದು ತಿಳಿಸಿದ್ದಾರೆ.

ಹುಲಿಯ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲದಿರುವುದನ್ನು ಗಮನಿಸಿದರೆ, ಕಳ್ಳ ಬೇಟೆಗಾರರಿಂದಾಗಲೀ, ಕಾದಾಟದಿಂದಾಗಲೀ ಸಾವನ್ನಪ್ಪಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಹಾಗಾದರೆ ಹುಲಿಯ ಸಾವಿಗೆ ಕಾರಣವೇನು ಎಂಬುದು ಮರನೋತ್ತರ ಪರೀಕ್ಷೆಯಿಂದಷ್ಟೆ ತಿಳಿಯ ಬೇಕಿದೆ.


Spread the love