
ಬಿ.ಕಾಟೀಹಳ್ಳಿ ಸಂತ ಜೋಸೆಫರ ಕಾಲೇಜಿನಲ್ಲಿ ಪರಂಪರಾ ದಿನಾಚರಣೆ
ಹಾಸನ: ಮಕರ ಸಂಕ್ರಾಂತಿ ಪ್ರಯುಕ್ತ ನಗರದ ಬಿ.ಕಾಟೀಹಳ್ಳಿಯಲ್ಲಿರುವ ಸಂತ ಜೋಸೆಫರ ಕಾಲೇಜಿನಲ್ಲಿ ಪರಂಪರಾ ದಿನ ವನ್ನು ಅದ್ಧೂರಿಯಾಗಿ ಆಚರಿಸುವುದರೊಂದಿಗೆ ಅಧ್ಯಾಪಕರು ವಿದ್ಯಾರ್ಥಿಗಳು ಸಂಭ್ರಮಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಡೇನಿಯಲ್ ಫೆರ್ನಾಂಡಿಸ್ ಎಸ್ಜೆರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಸಂಸ್ಖೃತಿ ನಮಗೆ ಹೆಮ್ಮೆ ನಮ್ಮ ಪರಪರೆಯನ್ನು ಹಿರಿಯರ ಮಾರ್ಗದರ್ಶನದೊಂದಿಗೆ ಇಂದಿನ ಯುವ ಜನತೆ ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.
ಇದೇ ವೇಳೆ ವಿದ್ಯಾರ್ಥಿನಿಯರು ಬಿ.ಕಾಟೀಹಳ್ಳಿ ಕೊಪ್ಪಲಿನ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕಾಲೇಜಿನವರೆಗೆ ಕಳಸ ಹೊತ್ತು ಸಂಸ್ಕೃತಿಯನ್ನು ಬಿಂಬಿಸಿದರು. ಅಲಂಕಾರ ಮಾಡಿದ ಎತ್ತಿನ ಗಾಡಿಯೊಂದಿಗೆ ನಂಧಿ ದ್ವಜ ಹಾಗೂ ತಮಟೆ ಗಟ್ಟಿಮೇಳದ ಓಲಗದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಿ ಕಾಲೇಜಿನಲ್ಲಿ ಕಳಸ ಪ್ರತಿಸ್ಠಾಪಿಸಿ ಸುಗ್ಗಿ ಪ್ರತಿಕವಾಗಿ ಧವಸ ಧಾನ್ಯಗಳನ್ನು ಪೂಜಿಸಿ ಎಲ್ಲರಿಗೂ ಎಳ್ಳುಬೆಲ್ಲ ವಿತರಿಸಲಾಯಿತು.
ಕಾಲೇಜಿನ ವಿದ್ಯಾರ್ಥಿಗಳಿಗೆ ಕೋಲಾಟದ ನೃತ್ಯ, ಮಡಿಕೆಹೊಡೆಯುವ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಗ್ರಾಮಸ್ಥರ ಸಹಕಾರ ಹಾಗೂ ವಾದ್ಯಮೇಳವು ಕಾರ್ಯಕ್ರಮಕ್ಕೆ ಮೆರಗುತಂದಿತ್ತು. ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.