
ಬೀಜಾಡಿ ಕರಾವಳಿ ಉತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಕರಾವಳಿ ಫ್ರೆಂಡ್ಸ್ ಬೀಜಾಡಿ ಇವರ ನೇತೃತ್ವದಲ್ಲಿ ಭಾನುವಾರ ಸಂಜೆ ಬೀಜಾಡಿಯ ಕರಾವಳಿ ಬೀಚ್ ಪರಿಸರದಲ್ಲಿ ಕರಾವಳಿ ಉತ್ಸವ ಮತ್ತು ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ಬೀಜಾಡಿ-ಗೋಪಾಡಿ ಶ್ರೀ ಚಿಕ್ಕು ಅಮ್ಮ ದೈವಸ್ಥಾನದ ಆಡಳಿತ ಮೊಕ್ತೇಸರ ಆನಂದ ಬಿಳಿಯ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಹಾಗೂ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಿರಿಯ ಸದಸ್ಯ ಸುರೇಶ್ ಬೆಟ್ಟಿನ್ ಇವರು ಕಿಂಡರ್ ಗಾರ್ಡ್‍ನ್ ಉದ್ಘಾಟಿಸಿ ಶುಭ ಹಾರೈಸಿದರು. ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ನಾಗರಾಜ್, ಸದಸ್ಯ ಶೇಖರ ಚಾತ್ರಬೆಟ್ಟು, ಕರಾವಳಿ ಫ್ರೆಂಡ್ಸ್ ಅಧ್ಯಕ್ಷ ಪ್ರಕಾಶ್ ತಾಂಡೇಲ್ ಉಪಸ್ಥಿತರಿದ್ದರು.
ಈ ಸಂದರ್ಭ ಸಮಾಜ ಸೇವಕ ಈಶ್ವರ್ ಮಲ್ಪೆ ಇವರಿಗೆ ಕರಾವಳಿ ರತ್ನ ಬಿರುದು ನೀಡಿ ಗೌರವಿಸಲಾಯಿತು. ಡ್ರಾಮಾ ಜ್ಯೂನಿಯರ್ ಸಿಸಿನ್ 4ರ ವಿನ್ನರ್ ಸಮೃದ್ಧಿ ಮೊಗವೀರ ಮತ್ತು ಚಿನ್ನದ ಪದಕ ವಿಜೇತ ವಿದ್ಯಾರ್ಥಿ ಆದರ್ಶ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಿವೃತ್ತ ಮೆಸ್ಕಾಂ ಅಧಿಕಾರಿ ಬಾಬಣ್ಣ ಪೂಜಾರಿ ಸ್ವಾಗತಿಸಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಓಂಕಾರ್ ಕಲಾವಿದರಿಂದ ಕುಂದಗನ್ನಡ ಹಾಸ್ಯಮಯ ನಗೆ ನಾಟಕ ಅಗೋಚರ ತೆರೆಯಲ್ಲಿ ಪ್ರದರ್ಶನಗೊಂಡಿತ್ತು.
ಕರಾವಳಿ ಉತ್ಸವ ಕಾರ್ಯಕ್ರಮದ ಅಂಗವಾಗಿ ಗಾಳಿಪಟ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆ, ನೃತ್ಯ ಗಾನ ವೈಭವ ಇನ್ನಿತರ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ಕರಾವಳಿ ಉತ್ಸವದ ಮೆರಗನ್ನು ಹೆಚ್ಚಿಸಿದವು. ಹಳ್ಳಿ ಸೊಗಡಿನ ಎತ್ತಿನಗಾಡಿ, ಕುದುರೆ ಸವಾರಿ, ಅಪ್ಪು ನೆನಪಿನ ಭಾವಚಿತ್ರದ ಕಟೌಟ್, ಶಿವ ಪರಮೇಶ್ವರ ದೇವರ ಭಾವಚಿತ್ರ, ಹಳೆಕಾಲದ ಜೀಪ್, ಹುಲಿ ಸೇರಿದಂತೆ ಮತ್ತಿತರ ಕಲಾಕೃತಿಗಳು ನೋಡುಗರ ಮನಸೆಳೆಯಿತು. ವಿದೇಶಿಗರು ಈ ಉತ್ಸವದಲ್ಲಿ ಪಾಲ್ಗೂಂಡು ಸಂಭ್ರಮಿಸಿದರು.