ಬೆಂಗಳೂರಲ್ಲಿ ಹವಾ ನಿಯಂತ್ರಿತ ವಿದ್ಯುತ್‍ಚಾಲಿತ ಬಸ್ಸುಗಳಿಗೆ ಚಾಲನೆ

Spread the love

ಬೆಂಗಳೂರಲ್ಲಿ ಹವಾ ನಿಯಂತ್ರಿತ ವಿದ್ಯುತ್‍ಚಾಲಿತ ಬಸ್ಸುಗಳಿಗೆ ಚಾಲನೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಭಾರತ ಸರ್ಕಾರದ “ಮೇಕ್ ಇನ್ ಇಂಡಿಯಾ” ವಿದ್ಯುತ್ ಬಸ್ ಫೇಮ್-2 ಯೋಜನೆಅಡಿಯಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್‍ ಚಾಲಿತ ಬಸ್ಸುಗಳನ್ನು ಮುಂದಿನ ದಿನಗಳಲ್ಲಿ ಕಾರ್ಯಾಚರಣೆಗೊಳಿಸಲಾಗುವುದು ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ಸಾರಿಗೆ ನಿಗಮದಿಂದ ಕಾರ್ಯಾಚರಿಸಲಿರುವ ವಿದ್ಯುತ್ ಚಾಲಿತ ಬಸ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾರಿಗೆ ನಿಗಮವು ವಿದ್ಯುತ್ ವಾಹನಗಳಿಗೆ ‘EV ಪವರ್ ಪ್ಲಸ್’ ಎಂದು ಹೆಸರಿಸಲಾಗಿದೆ “ಅತ್ಯುತ್ತಮ ಅನುಭವ” ಎಂದು ಟ್ಯಾಗ್‍ಲೈನನ್ನು ನೀಡಿರುತ್ತದೆ ಎಂದರಲ್ಲದೆ, ಈ ಪ್ರಾಯೋಗಿಕ ಯಶಸ್ವಿ ಕಾರ್ಯಾಚರಣೆ ನಂತರದಲ್ಲಿ ಸದರಿ ವಾಹನಗಳನ್ನು ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಮಾರ್ಗಗಳಲ್ಲಿ ಕಾರ್ಯಾಚರಣೆ ಗೊಳಿಸಲು ಯೋಜಿಸಲಾಗಿದೆ. ವಿದ್ಯುತ್ ವಾಹನಗಳ ಚಾರ್ಚಿಂಗ್ ಕೇಂದ್ರವನ್ನು ಬೆಂಗಳೂರು (ಕೆ.ಬಿ.ಎಸ್), ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ನಲ್ಲಿ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಕೆ.ಎಸ್.ಆರ್.ಟಿ.ಸಿ ಯು ಸಿಬ್ಬಂದಿಗಳಿಗೆ ರೂ.1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ವತಿಯಿಂದ ಪ್ರೀಮಿಯಂ ರಹಿತ ರೂ 50 ಲಕ್ಷಗಳ ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್‍ರವರಿಂದ ವಾರ್ಷಿಕ ರೂ.885/- ಪ್ರೀಮಿಯಂ ಪಾವತಿಯ ಮೇರೆಗೆ ರೂ.50 ಲಕ್ಷಗಳ ವಿಮಾಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.

ಇದೇ ಸಂದರ್ಭ 1013 ಸಿಬ್ಬಂದಿಗಳ ಅಂತರ ನಿಗಮ ವರ್ಗಾವಣಾ ಪಟ್ಟಿಯನ್ನು ಮಾನ್ಯ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಮತ್ತು ನಿಗಮದ ಮಾನ್ಯ ಅಧ್ಯಕ್ಷರು ಬಿಡುಗಡೆಗೊಳಿಸಿ ಸಾಂಕೇತಿಕವಾಗಿ 03 ಸಿಬ್ಬಂದಿಗಳಿಗೆ ವರ್ಗಾವಣಾ ಪತ್ರವನ್ನು ನೀಡಲಾಯಿತು. ನಿಗಮದ ಕಾರ್ಯಚಟುವಟಿಕೆಗಳು, ಜಾರಿಗೊಳಿಸಲಾದ ಕಾರ್ಮಿಕ ಕಲ್ಯಾಣ ಯೋಜನೆಗಳು, ವಿನೂತನ ಕಾರ್ಯಕ್ರಮ, ನೂತನ ಅವಿಷ್ಕಾರ, ವಿಷಯಗಳನ್ನು ಒಳಗೊಂಡ ಆಂತರಿಕ ನಿಯತ ಕಾಲಿಕ “ಸಾರಿಗೆ ಸಂಪದ”ವನ್ನು ಬಿಡುಗಡೆ ಮಾಡಲಾಗಿದ್ದು ಈ ನಿಯತ ಕಾಲಿಕವನ್ನು ನಿಗಮದ ಸಮಸ್ತ ಸಿಬ್ಬಂದಿಗಳಿಗೂ ಮಾಹಿತಿಗಾಗಿ ವಿತರಿಸಲಾಗುತ್ತದೆ ಎಂದರು.

ಇದೇ ವೇಳೆ ನಿಗಮವು ಇತ್ತೀಚಿನ 7-8 ತಿಂಗಳಿನಲ್ಲಿ ಕೈ ಗೊಂಡಿರುವ ಕಾರ್ಮಿಕ ಕಲ್ಯಾಣ ಯೋಜನೆಗಳ ಮಾಹಿತಿಯನ್ನು ಒಳಗೊಂಡ ಕಿರು ಹೊತ್ತಿಗೆಯನ್ನು ಸಹ ಈ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು.


Spread the love