ಬೆಂಗಳೂರಿನಲ್ಲಿ ಕೃಷಿಮೇಳದ ಪ್ರೋಮೊ ಬಿಡುಗಡೆ

Spread the love

ಬೆಂಗಳೂರಿನಲ್ಲಿ ಕೃಷಿಮೇಳದ ಪ್ರೋಮೊ ಬಿಡುಗಡೆ

ಬೆಂಗಳೂರು: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಕೃಷಿ ಮೇಳ-2022 ಕುರಿತು ಚಿತ್ರನಟ ವಿಜಯ್‍ರಾಘವೇಂದ್ರ ಮತ್ತು ಚಿತ್ರನಟಿ ಹರ್ಷಿಕಾ ಪೂಣಚ್ಚರ ಪ್ರೋಮೊವನ್ನು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಕೆ.ಸಿ. ನಾರಾಯಣಸ್ವಾಮಿಯವರು ಬಿಡುಗಡೆ ಮಾಡಿದರು.

 

ಚಿತ್ರರಂಗದವರು ಕೃಷಿ ಮೇಳ ಕುರಿತು ಪ್ರೋಮೊ ನೀಡಿರುವುದು ಕೃಷಿ ಮೇಳದ ಇತಿಹಾಸದಲ್ಲಿಯೇ ಪ್ರಪ್ರಥಮ. ಇದುವರೆಗೆ ಯಾವುದೇ ಕೃಷಿ ಸಂಬಂಧಿ ವಿಶ್ವವಿದ್ಯಾನಿಲಯಗಳ ಕೃಷಿಮೇಳ ಕುರಿತು ಚಲನಚಿತ್ರರಂಗದವರು ಪ್ರೋಮೊ ನೀಡಿರುವುದಿಲ್ಲ. ಇದು ಅತ್ಯುತ್ತಮ ಬೆಳವಣಿಗೆ, ಕೃಷಿ ಮತ್ತು ಕೃಷಿಕರ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ವಿಜಯ್‍ರಾಘವೇಂದ್ರ ಮತ್ತು ಹರ್ಷಿಕಾ ಪೂಣಚ್ಚರವರ ಆಸಕ್ತಿ ಮತ್ತು ಕಾರ್ಯ ಮೆಚ್ಚವಂತಹದ್ದು. ತಮ್ಮ ಬಿಡುವಿಲ್ಲದ ಸಮಯದ ನಡುವೆಯು ಬಿಡುವುಮಾಡಿ ಕೊಂಡು ಕೃಷಿ ಆಸಕ್ತರು ಕೃಷಿ ಮೇಳದಲ್ಲಿ ಭಾಗವಹಿಸುವಂತೆ ವಿನಂತಿ ಮಾಡಿಕೊಂಡಿರುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಕೃಷಿ ಮೇಳದಲ್ಲಿ ಭಾಗವಹಿಸುತ್ತಾರೆ ಎಂದರು.

ಈ ಕಾರ್ಯವು ರೈತರ ಜಮೀನಿಗೆ ಕೃಷಿ ತಂತ್ರಜ್ಞಾನಗಳು ತ್ವರಿತವಾಗಿ ವರ್ಗಾವಣೆಯಾಗಲು ತನ್ಮೂಲಕ ಕೃಷಿ ಅಭಿವೃದ್ದಿಗೆ ಸಹಕಾರಿಯಾಗುತ್ತದೆ. ಸಮಾಜದ ಗಣ್ಯವ್ಯಕ್ತಿಗಳು ಕೃಷಿ ಮತ್ತು ಕೃಷಿಕರ ಬಗ್ಗೆ ಮೆಚ್ಚುಗೆಯ ಮಾತನಾಡಿ ಕೃಷಿಪರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಹೆಚ್ಚಿನ ಸಂಖ್ಯೆಯ ಯುವಕರು ಕೃಷಿಯತ್ತ ಒಲವು ತೋರಲು ಮುಂದಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಡಾ.ಕೆ.ನಾರಾಯಣಗೌಡ, ವಿಸ್ತರಣಾ ನಿರ್ದೇಶಕರು, ಡಾ. ಕೆ.ಬಿ. ಉಮೇಶ್, ಸಂಶೋಧನಾ ನಿರ್ದೇಶಕರು,ಡಾ. ಎಂ.ಬಿ. ಪ್ರಕಾಶ್, ಡೀನ್ (ಕೃಷಿ) ಮತ್ತು ಡಾ.ವೆಂಕಟೇಶ್, ಹಣಕಾಸು ನಿಯಂತ್ರಣಾಧಿಕಾರಿಗಳು ಉಪಸ್ಥಿತರಿದ್ದರು. ಚಲನಚಿತ್ರ ನಟ-ನಟಿಯರ ಮನವಿ ಒಳಗೊಂಡ ಕೃಷಿಮೇಳ-2022ರ ಪ್ರೋಮೊ ಸುಂದರವಾಗಿ ಮೂಡಿಬರಲು ಸಹಕರಿಸಿದ ಚಲನಚಿತ್ರ ನಿರ್ಮಾಪಕರಾದ ಎನ್. ಆರ್. ನಂಜುಂಡೇಗೌಡ ಮತ್ತು ಕೋಲಾರ್ ನಾಗೇಶ್ ರವರಿಗೆ ಡಾ.ಕೆ.ಶಿವರಾಮು, ಹಿರಿಯ ವಾರ್ತಾ ತಜ್ಞರು ಕೃತಜ್ಞತೆಯನ್ನು ಸಲ್ಲಿಸಿದರು.


Spread the love