
Spread the love
ಬೆಂಗಳೂರಿನ ಪಿಜಿಗಳಲ್ಲಿ ವೇಶ್ಯಾವಾಟಿಕೆ ಚಟುವಟಿಕೆ: 26 ಯುವತಿಯರ ರಕ್ಷಣೆ, 9 ಮಂದಿ ಬಂಧನ
ಬೆಂಗಳೂರು: ಉದ್ಯೋಗದ ನೆಪವೊಡ್ಡಿ ಯುವತಿಯನ್ನು ಕರೆತಂದು ಬೆಂಗಳೂರಿನ ಪಿಜಿ(ಅತಿಥಿ ಗೃಹ)ಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಪ್ರಕರಣವೊಂದನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, 9 ಮಂದಿಯನ್ನು ಬಂಧಿಸಿ 26 ಯುವತಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿರ್ಕಿ ಅಪಾರ್ಟ್‍ಮೆಂಟ್ ಎದುರು ರಸ್ತೆಯ ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್‍ನ ಪಿಜಿವೊಂದರಲ್ಲಿ ಯುವತಿಯರನ್ನು ಕೊಡಿ ಹಾಕಿ, ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Spread the love