
ಬೆಲೆ ಇಲ್ಲದೆ ಬೆಳೆ ಬೀದಿಗೆಸೆಯುವ ರೈತರಿಂದ ಖರೀದಿಗೆ ಮುಂದಾದ ಪನಮಾ ಸಂಸ್ಥೆ
ಮಂಗಳೂರು: ಕೊರೋನ 2ನೆ ಅಲೆಯ ಲಾಕ್ಡೌನ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಅವರ ನೇತೃತ್ವದಲ್ಲಿ ಈವರೆಗೆ 16,000 ಮಂದಿಗೆ ಊಟ, ಸುಮಾರು 4,350 ಕುಟುಂಬದವರಿಗೆ ಮತ್ತು ದಿನಗೂಲಿ ನೌಕರರಿಗೆ ಕಿಟ್ ನೀಡಲಾಗಿದೆ. ಮತ್ತೆ ದ.ಕ. ಜಿಲ್ಲೆ.ಯಲ್ಲಿ ಸಂಕಷ್ಟದಲ್ಲಿರುವ 5,000 ಕುಟುಂಬಕ್ಕೆ ಕಿಟ್ ಒದಗಿಸುವ ನಿಟ್ಟಿನಲ್ಲಿ 50 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಪನಮಾ ನೇಚರ್ ಫ್ರೆಶ್ ಸಂಸ್ಥೆಯ ಅಧ್ಯಕ್ಷ ವಿವೇಕ್ ರಾಜ್ ಮಾಹಿತಿ ನೀಡಿದ್ದಾರೆ.
ನಗರದ ಹಂಪನಕಟ್ಟೆಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರು ತಾವು ಬೆಳೆದ ಬೆಳೆದ ಉತ್ಪನ್ನವನ್ನು ಬೆಲೆ ಇಲ್ಲದೆ ಬೀದಿಗೆಸೆಯುವುದನ್ನು ಖರೀದಿಸಿ ರೈತರಿಗೆ ಒಂದಿಷ್ಟು ರೀತಿಯಲ್ಲಿ ಸಹಕಾರ ನೀಡುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯ ಸಿಬ್ಬಂದಿ ಮೂಲಕ ವ್ಯವಸ್ಥೆ ಮಾಡಲಾಗುವುದು. ಸಂಸ್ಥೆಯು ಹೊಂದಿರುವ 13 ಕ್ಲೈಮೇಟ್ ಕಂಟೇನರ್ಗಳ ಮೂಲಕ ರಾಜ್ಯದ ವಿವಿಧ ಭಾಗಗಳಲ್ಲಿರುವ ರೈತರಿಂದ ಇಂತಹ ಹಣ್ಣು ತರಕಾರಿಗಳನ್ನು ಖರೀದಿಸಲಾಗುವುದು. ಇದಕ್ಕಾಗಿಯೇ ಸುಮಾರು 75 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪನಮಾ ಸಂಸ್ಥೆಯ ಸಿಇಓ ರಝಾಕ್ ಉಪಸ್ಥಿತರಿದ್ದರು.