Home Mangalorean News Kannada News ಬೆಳ್ತಂಗಡಿ : ಅಕ್ರಮ ಕಲ್ಲು ಗಣಿಗಾರಿಕೆಗೆ ದಾಳಿ – ಇಬ್ಬರ ಬಂಧನ

ಬೆಳ್ತಂಗಡಿ : ಅಕ್ರಮ ಕಲ್ಲು ಗಣಿಗಾರಿಕೆಗೆ ದಾಳಿ – ಇಬ್ಬರ ಬಂಧನ

Spread the love

ಬೆಳ್ತಂಗಡಿ : ಅಕ್ರಮ ಕಲ್ಲು ಗಣಿಗಾರಿಕೆಗೆ ದಾಳಿ – ಇಬ್ಬರ ಬಂಧನ

ಮಂಗಳೂರು: ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ಓಡಿಕಾರು ಎಂಬಲ್ಲಿ ಅಕ್ರಮ ವಾಗಿ ನಡೆಯುತ್ತಿದ್ದ ಕಪ್ಪು ಕಲ್ಲು ಗಣಿಗಾರಿಕೆ ಮಾಡುತ್ತಿದ್ದಲ್ಲಿಗೆ ಬೆಳ್ತಂಗಡಿ ತಾಲ್ಲೂಕು ತಹಶೀಲ್ದಾರ್ ದಾಳಿ ನಡೆಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೆಳ್ತಂಗಡಿ ತಾಲೂಕು ಲಾಯಿಲ ನಿವಾಸಿ ಪ್ರತೀಕ್ ಸಾಲ್ಯಾನತ್ ಮತ್ತು ವೇಣೂರು ನಿವಾಸಿ ಅಣ್ಣಪ್ಪ ಎಂದು ಗುರುತಿಸಲಾಗಿದೆ.

ಮಾರ್ಚ್ 19 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ಓಡಿಕಾರು ಎಂಬಲ್ಲಿ ಅಕ್ರಮ ವಾಗಿ ನಡೆಯುತ್ತಿದ್ದ ಕಪ್ಪು ಕಲ್ಲು ಗಣಿಗಾರಿಕೆ ಮಾಡುತ್ತಿದ್ದಲ್ಲಿಗೆ ಬೆಳ್ತಂಗಡಿ ತಾಲ್ಲೂಕು ತಹಶಿಲ್ದಾರವರು ದಾಳಿ ನಡೆಸಿದ್ದು, ಸ್ಥಳದಲ್ಲಿ ಜಿಲೆಟಿನ್ ಕಡ್ಡಿಗಳು ವೈರ್ ಜೀವಂತ ಮದ್ದುಗಳು -11, ಚೀಲದಲ್ಲಿ ಜಿಲೆಟಿನ್ ಕಡ್ಡಿಗಳು -15 ಇದ್ದು, ಕೆಲಸಕ್ಕೆ ಬಳಸಿದ ಟ್ರಾಕ್ಟರ್ ಟಿ ನಂಬ್ರ: 33-ಎಎಕ್ಸ್ 7275, ಹಳದಿ ಇಟಾಚಿ ನಂಬ್ರ:310, ಕೆಂಪು ಇಟಾಚಿ ನಂಬ್ರ:22922 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 25 ಲಕ್ಷ ಆಗಿರುತ್ತದೆ.

ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version