ಬೆಳ್ತಂಗಡಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Spread the love

ಬೆಳ್ತಂಗಡಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಬೆಳ್ತಂಗಡಿ: ಎನ್ ಡಿ ಪಿಎಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಅಂಜುಮ್ ಖಾನ್ ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ 73/18 ಕಲಂ. 8.(C) ಜೊತೆಗೆ 20(B) ಎನ್ ಡಿ ಪಿ ಎಸ್ ಆಕ್ಟ್ ಪ್ರಕರಣದಲ್ಲಿ ತಲೆಮರೆಸಿ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿದ್ದ ಅಂಜುಮ್ ಖಾನ್ ಎಂಬಾತನನ್ನು ಮೂಡಿಗೆರೆ ತಾಲೂಕು ಬಣಕಲ್ ನಿಂದ ವ್ರತ್ತ ನಿರೀಕ್ಷಕರು ಶಿವಕುಮಾರ್.ಬೆಳ್ತಂಗಡಿ ಪೊಲೀಸ್ ಠಾಣಾ ಹೆಚ್ ಸಿ ವ್ರಷಭ ಹಾಗೂ ಪಿಸಿ ಬಸವರಾಜ್ ರವರು ದಸ್ತಗಿರಿ ಮಾಡಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.


Spread the love