ಬೆಳ್ತಂಗಡಿ: ಮನೆ ಕಳ್ಳತನ ಆರೋಪಿಯ ಬಂಧನ

Spread the love

ಬೆಳ್ತಂಗಡಿ: ಮನೆ ಕಳ್ಳತನ ಆರೋಪಿಯ ಬಂಧನ

ಮಂಗಳೂರು: ಮನೆಗೆ ನುಗ್ಗಿ ಕಳ್ಳತನ ಮಾಡಿದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕು ಮುಂಡಾಜೆ ನಿವಾಸಿ ಇಂತಿ@ಇಂತಿಯಾಜ್‌ (37) ಎಂದು ಗುರುತಿಸಲಾಗಿದೆ.

ಸುಲೈಮಾನ್   ಎಂಬವರು ದಿನಾಂಕ: 22-01-2022 ರಂದು ಬೆಳಿಗ್ಗೆ 07-00 ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕಕ್ಕೆಜಾಲು ಎಂಬಲ್ಲಿರುವ ತನ್ನ ಮನೆಗೆ ಬೀಗ ಭದ್ರತೆಯನ್ನು ಮಾಡಿಕೊಂಡು ಸಂಸಾರ ಸಮೇತ ಭದ್ರಾವತಿಗೆ ಹೋದವರು ದಿನಾಂಕ 23-01-2022 ರಂದು 21-00 ಗಂಟೆಗೆ ವಾಪಾಸು ಬಂದು ನೋಡಿದಾಗ ಮನೆಯ ಸಿಟೌಟ್ ನಲ್ಲಿ ಇರಿಸಿದ್ದ ಆಕ್ಟೀವಾ 6 ಜಿ ಕೆಎ -70-H-6501 ನೇ ದ್ವಿ ಚಕ್ರ ವಾಹನ ಇಲ್ಲದೇ ಇದ್ದು, ಮನೆಯ ಒಳಗೆ ಬಂದು ನೋಡಿದಾಗ ಮನೆಯ ಮಾಡಿನ ಹಂಚನ್ನು ಯಾರೋ ಕಳ್ಳರು ತೆಗೆದು ಒಳ ಪ್ರವೇಶಿಸಿ ಗೋಡ್ರೇಜ್ ಚೆಲ್ಲಾಪಿಲ್ಲಿಯಾಗಿದ್ದು, ನೋಡಲಾಗಿ ಗೋಡ್ರೇಜ್ ನಲ್ಲಿದ್ದ ನಗದು ರೂ 60,000/- 1 ಗ್ರಾಂ ತೂಕದ 1 ಜೊತೆ ಕಿವಿಯೋಲೆ, ಅಂದಾಜು ಮೌಲ್ಯ ರೂ 1500/-, 2 ಗ್ರಾಂ ತೂಕದ ಉಂಗುರಗಳು -2, ಅಂದಾಜು ಮೌಲ್ಯ 3000/- ರೂ ನೋಕಿಯಾ ಕಂಪೆನಿಯ ಸಣ್ಣ ಮೊಬೈಲ್ -1,ಅಂದಾಜು ಮೌಲ್ಯರೂ 600/- ಹಾಗೂ ಒಳಗಿದ್ದ ಆಕ್ಟೀವಾ 6ಜಿ ದ್ವಿ ಚಕ್ರ ವಾಹನದ ಕೀಯನ್ನು ಕದ್ದುಮನೆಯ ಸಿಟೌಟ್ ನಲ್ಲಿದ್ದ ಆಕ್ಟೀವಾ 6ಜಿ ಸಮೇತ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ 1,35,100/- ಆಗಬಹುದು ಎಂಬಿತ್ಯಾದಿ ದೂರಿನ ಆಧಾರದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ:07/2022 ಕಲಂ: 454,457,380,379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಪ್ರಕರಣದ ಆರೋಪಿ ಇಂತಿ @ ಇಂತಿಯಾಜ್,ಪ್ರಾಯ:37 ತಂದೆ:ಬಿ.ಶೇಖಬ್ಬ ವಾಸ: ಚೆನ್ನಿಗುಡ್ಡೆ ಮನೆ, ಮುಂಡಾಜೆ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬಾತನನ್ನು ಈ ದಿನ ದಿನಾಂಕ:31.01.2022 ರಂದು ವಶಕ್ಕೆ ಪಡೆದು ಆರೋಪಿತನಿಂದ ನಗದು 3500/- , ಒಂದು ಜೊತೆ ಕಿವಿಯೋಲೆ, 2 ಸಣ್ಣ ಉಂಗುರ ಹಾಗೂ ಆಕ್ಟೀವಾವನ್ನು ಸ್ವಾಧೀನಪಡಿಸಿದ್ದು, ಸ್ವಾಧೀನಪಡಿಸಿದ ಒಟ್ಟು ಮೌಲ್ಯ 78,000/- ಆಗಿರುತ್ತದೆ.ಆರೋಪಿಯನ್ನು ದಸ್ತಗಿರಿ ಮಾಡಿ  ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.


Spread the love