ಬೆಳ್ತಂಗಡಿ ಯುವಕನ ಶವ ಉಳ್ಳಾಲ ನೇತ್ರಾವತಿ ನದಿಯಲ್ಲಿ ಪತ್ತೆ

Spread the love

ಬೆಳ್ತಂಗಡಿ  ಯುವಕನ ಶವ ಉಳ್ಳಾಲ ನೇತ್ರಾವತಿ ನದಿಯಲ್ಲಿ ಪತ್ತೆ

ಉಳ್ಳಾಲ: ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೆಳ್ತಂಗಡಿಯ ಮಚ್ಚಿನ ಗ್ರಾಮದ ನೇರಳಪಲ್ಕೆ ನಿವಾಸಿ ಯುವಕನ ಮೃತದೇಹ ಉಳ್ಳಾಲ ಉಳಿಯ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ರಾಜೇಶ್ (38) ಮೃತದೇಹ ಇಂದು ಪತ್ತೆಯಾಗಿದೆ.. ಇಂದು ನಸುಕಿನ ಜಾವ ಮೃತದೇಹ ಉಳ್ಳಾಲ ಉಳಿಯ ನೇತ್ರಾವತಿ ನದಿ ತೀರಕ್ಕೆ ತೇಲಿಬಂದಿದ್ದು, ಉಳಿಯ ನಿವಾಸಿ ಪ್ರೇಮ್ ಪ್ರಕಾಸ್ ಡಿಸೋಜ ನೇತೃತ್ವದ ತಂಡ ಮೃತದೇಹ ಮೇಲಕ್ಕೆತ್ತುವಲ್ಲಿ ಸಹಕರಿಸಿದರು. ರಾಜೇಶ್ ಉಳ್ಳಾಲ ಸಮೀಪವೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ನಡೆಸಿರುವ ಶಂಕೆ ಇದೆ. ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love