ಬೆಳ್ಳಾರೆ: ಸಂಘ ಪರಿವಾರದ ಮುಖಂಡನಿಗೆ ಜೀವ ಬೆದರಿಕೆ ಹಾಕಿದ ಆರೋಪಿಯ ಬಂಧನ

Spread the love

ಬೆಳ್ಳಾರೆ: ಸಂಘ ಪರಿವಾರದ ಮುಖಂಡನಿಗೆ ಜೀವ ಬೆದರಿಕೆ ಹಾಕಿದ ಆರೋಪಿಯ ಬಂಧನ

ಮಂಗಳೂರು: ಬೆಳ್ಳಾರೆಯ   ಪ್ರಶಾಂತ್ ರೈ ಎಂಬವರಿಗೆ ದೂರವಾಣಿ ಕರೆ ಮಾಡಿ ಅವ್ಯಾಚವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದನೆನ್ನಲಾದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಳ್ಳಾರೆ ನಿವಾಸಿ ಸಫ್ರೀದ್ ಎಂದು ಗುರುತಿಸಲಾಗಿದೆ.

ಈತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿ ಶಫೀಕ್ ಬೆಳ್ಳಾರೆಯ ಸಹೋದರ ಎಂದು ತಿಳಿದುಬಂದಿದೆ. ಸಂಘ ಪರಿವಾರದ ಕಾರ್ಯಕರ್ತರಾಗಿರುವ ಪ್ರಶಾಂತ್ ರೈ ಬೆಳ್ಳಾರೆಗೆ ಶನಿವಾರ ಸಂಜೆ ಆರೋಪಿ ಸಫ್ರೀದ್ ದೂರವಾಣಿ ಕರೆ ಮಾಡಿ ಅವ್ಯಾಚವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದನೆನ್ನಲಾಗಿದೆ. ಈ ಬಗ್ಗೆ ಪ್ರಶಾಂತ್ ರೈ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ಈ ನಡುವೆ ಬೆಳ್ಳಾರೆ ಠಾಣೆಯೆದುರು ಜಮಾಯಿಸಿದ ಸಂಘ ಪರಿವಾರದ ಕಾರ್ಯಕರ್ತರು ಆರೋಪಿ ಸಫ್ರೀದ್ ನನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದರು.

ಇದೀಗ ಆರೋಪಿ ಸಫ್ರೀದ್ ನನ್ನು ಮಂಗಳೂರಿನ ಬಜ್ಪೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.


Spread the love

Leave a Reply

Please enter your comment!
Please enter your name here