
ಬೈಂದೂರು: ಅಕ್ರಮ ದಾಸ್ತಾನು ಇರಿಸಿದ ರೂ 4.02 ಲಕ್ಷ ಮೌಲ್ಯದ ಅನ್ನಭಾಗ್ಯ ಯೋಜನೆಯ ಅಕ್ಕಿ ವಶ
ಬೈಂದೂರು: ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ರೂ 4.02 ಲಕ್ಷ ಮೌಲ್ಯದ ಅಕ್ಕಿಯನ್ನು ಕಾನೂನು ಬಾಹಿರವಾಗಿ ದಾಸ್ತಾನು ಇರಿಸಿದ ವ್ಯಕ್ತಿಯ ವಿರುದ್ದ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು ಆಹಾರ ನಿರೀಕ್ಷಕರಾದ ವಿನಯ್ ಕುಮಾರ್ ಅವರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾಲ್ತೋಡು ಗ್ರಾಮದ ಬೋಳಂಬಳ್ಳಿ ಎಂಬಲ್ಲಿನ ಪ್ರಥ್ವಿರಾಜ್ ಜೈನ್ ಎಂಬವರಿಗೆ ಸಂಬಂಧಿಸಿದ ಪ್ರಥ್ವಿ ಗೇರು ಬೀಜ ಕಾರ್ಖಾನೆಯ ಗೋದಾಮಿನಲ್ಲಿ ಕಿರಿಮಂಜೇಶ್ವರ ನಿವಾಸಿ ಅಯೂಬ್ (32) ಎಂಬ ವ್ಯಕ್ತಿ ಎಂಬಾತನು ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ದಾಸ್ತಾನು ಇರಿಸಿದ ಸ್ಥಳಕ್ಕೆ ದಾಳಿ ನಡೆಸಿ ಪ್ರಥ್ವಿರಾಜ್ ಜೈನ್ ರವರಿಗೆ ಸಂಬಂಧಿಸಿದ ಪ್ರಥ್ವಿ ಗೇರು ಬೀಜ ಕಾರ್ಖಾನೆಯ ಗೋದಾಮಿನಲ್ಲಿದ್ದ 4,02,000/- ರೂಪಾಯಿ ಮೌಲ್ಯದ 335 ಚೀಲ (16750 ಕೆಜಿ) ಯಷ್ಟು ಅಕ್ಕಿಯನ್ನು ಮತ್ತು ಇಲೆಕ್ಟ್ರಾನಿಕ್ ತೂಕದ ಯಂತ್ರ, ಚೀಲ ಹೊಲಿಯುವ ಯಂತ್ರ ಹಾಗೂ 10 ಗೋಣಿ ಚೀಲಗಳನ್ನು ಸ್ವಾಧೀನಪಡಿಸಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.