ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಮತದಾನ

Spread the love

ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಮತದಾನ

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಇಂದು ಬೆಳಿಗ್ಗೆ ಕನ್ಯಾನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.

ಹಟ್ಟಿಯಂಗಡಿ ಗ್ರಾ.ಪಂ ವ್ಯಾಪ್ತಿಯ ಕನ್ಯಾನ ಮತಗಟ್ಟೆಗೆ ಬೆಳಗ್ಗೆ 7 ಗಂಟೆಗೆ ಪತ್ನಿ ಹಾಗೂ ಕುಟುಂಬಿಕರೊಂದಿಗೆ ಆಗಮಿಸಿ ಮತದಾನ‌ ಮಾಡಿದರು.

ಬೆಳಕಿನ ಕೊರತೆ ಸರಿಪಡಿಸಲು ಮನವಿ:
ಇವಿಎಂ ಯಂತ್ರದ ಬಳಿ ಬೆಳಕಿನ‌ ಕೊರತೆ ಇದ್ದು, ಹೆಸರು ಚಿಹ್ನೆ ಅಸ್ಪಷ್ಟವಾಗಿ ಗೋಚರಿಸುತ್ತಿದೆ. ತಕ್ಷಣವೇ ಬೆಳಕಿನ ವ್ಯವಸ್ಥೆ ಸರಿಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.


Spread the love

Leave a Reply

Please enter your comment!
Please enter your name here