ಬೈಂದೂರು:  ನಾಡದೋಣಿ ಮಗುಚಿ ದುರಂತ: ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ

Spread the love

ಬೈಂದೂರು:  ನಾಡದೋಣಿ ಮಗುಚಿ ದುರಂತ: ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ

ಬೈಂದೂರು: ಮೀನುಗಾರಿಕೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ನಾಡದೋಣಿ ಮಗುಚಿ ಓರ್ವ ಮೃತಪಟ್ಟು, ಇನ್ನೋರ್ವ ಮೀನುಗಾರ ನಾಪತ್ತೆಯಾದ ಘಟನೆ ಉಪ್ಪುಂದ ಸಮೀಪದ ಕರ್ಕಿಕಳಿಯಲ್ಲಿ ಸೋಮವಾರ ಸಂಜೆ ನಡೆದಿದೆ.

ನಾಗೇಶ್ ಬಾಬು ಖಾರ್ವಿ (30) ಎಂಬುವವರು ಮೃತಪಟ್ಟಿದ್ದಾರೆ. ಸತೀಶ್ ಖಾರ್ವಿ (34) ನಾಪತ್ತೆಯಾಗಿದ್ದು ಹುಡುಕಾಟ ನಡೆಸಲಾಗುತ್ತಿದೆ.

ಸಚಿನ್ ಖಾರ್ವಿ ಎಂಬವವರಿಗೆ ಸೇರಿದ ಮಾಸ್ತಿ ಮರ್ಲಿಚಿಕ್ಕು ಪ್ರಸಾದ ಹೆಸರಿನ ದೋಣಿಯಲ್ಲಿ 8 ಮಂದಿ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ದಡಕ್ಕೆ ಸಮೀಪವಿರುವಾಗಲೇ ಈ ದುರಂತ ಸಂಭವಿಸಿದೆ. ದೋಣಿಯಲ್ಲಿದ್ದ 6 ಮಂದಿ ಮೀನುಗಾರರು ಈಜಿ ದಡ ಸೇರಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದುರಂತಕ್ಕೀಡಾದ ದೋಣಿಯನ್ನು ಮೀನುಗಾರರು ದಡಕ್ಕೆ ಎಳೆದು ತಂದಿದ್ದಾರೆ. ಬೈಂದೂರು ಠಾಣೆ ಪೊಲೀಸರು, ಗಂಗೊಳ್ಳಿ ಬಂದರು ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಕಲೆಹಾಕಿದ್ದಾರೆ. ನೀರಿಪಾಲಾದ ಮೀನುಗಾರನಿಗಾಗಿ ಶೋದ ಕಾರ್ಯ ನಡೆಯುತ್ತಿದೆ.


Spread the love